ಬಿಹಾರ: ಸಿಡಿಲು ಬಡಿದು 7 ಮಂದಿ ದುರ್ಮರಣ

ಸಿಡಿಲಿನ ಹೊಡೆತಕ್ಕೆ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಬಾಂಕಾ ಜಿಲ್ಲೆಯಲ್ಲಿ ಸಿಡಿಲಿಗೆ 7 ಮಂದಿ ಮೃತಪಟ್ಟ ಸಂಗತಿಯಿಂದ ಬೇಸರವಾಗಿದೆ ಎಂದು ಆರೋಗ್ಯ ಸಚಿವ ಮಂಗಲ್‌ ಪಾಂಡೆ ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬಾಂಕಾ: ಸಿಡಿಲಿನ ಹೊಡೆತಕ್ಕೆ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಬಾಂಕಾ ಜಿಲ್ಲೆಯಲ್ಲಿ ಸಿಡಿಲಿಗೆ 7 ಮಂದಿ ಮೃತಪಟ್ಟ ಸಂಗತಿಯಿಂದ ಬೇಸರವಾಗಿದೆ ಎಂದು ಆರೋಗ್ಯ ಸಚಿವ ಮಂಗಲ್‌ ಪಾಂಡೆ ಮಾಹಿತಿ ನೀಡಿದ್ದಾರೆ.

ಮೃತ ಪಟ್ಟವರ ಕುಟುಂಬದ ಜೊತೆ ಬಿಹಾರ ಸರ್ಕಾರ ಇದೆ. ಮೃತರಿಗೆ ತೀವ್ರ ಸಂತಾಪಗಳು. ಸಿಡಿಲಿನ ಹೊಡೆತಕ್ಕೆ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪಾಂಡೆ ಟ್ವೀಟ್‌ ಮಾಡಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಭಾರತ ದೇಶದಾದ್ಯಂತ ಗುಡುಗು, ಸಿಡಿಲುಗಳು ಹೆಚ್ಚಾಗಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com