ಒಂದೇ ಲಸಿಕೆಯ ಎರಡು ಡೋಸ್ ಗಳಿಗಿಂತ ಕೋವಿಶೀಲ್ಡ್, ಕೋವ್ಯಾಕ್ಸಿನ್ ಸಂಯೋಜನೆಯ ಡೋಸ್ ನಿಂದ ಉತ್ತಮ ಫಲಿತಾಂಶ!

ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಐಸಿಎಂಆರ್ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಅಂಶ ಬಹಿರಂಗಗೊಂಡಿದೆ. 
ಕೋವಾಕ್ಸಿನ್ ಲಸಿಕೆ ತೋರಿಸುತ್ತಿರುವ ಆರೋಗ್ಯ ಕಾರ್ಯಕರ್ತೆ
ಕೋವಾಕ್ಸಿನ್ ಲಸಿಕೆ ತೋರಿಸುತ್ತಿರುವ ಆರೋಗ್ಯ ಕಾರ್ಯಕರ್ತೆ
Updated on

ನವದೆಹಲಿ: ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಐಸಿಎಂಆರ್ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಅಂಶ ಬಹಿರಂಗಗೊಂಡಿದೆ. 98 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 18 ಮಂದಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳ ಲಸಿಕೆಯನ್ನು ಪಡೆದುಕೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಮೊದಲ ಡೋಸ್ ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡು ಎರಡನೇ ಡೋಸ್ ನಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದರು. ಈ ರೀತಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳನ್ನು ಪಡೆದವರಲ್ಲಿ ಎರಡೂ ಡೋಸ್ ಗಳಲ್ಲಿ ಒಂದೇ ಲಸಿಕೆ ಪಡೆದುಕೊಂಡವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಪತ್ತೆಯಾಗಿದೆ. 

ಉತ್ತರ ಪ್ರದೇಶದಲ್ಲಿ ಸೆರೆಂಡಿಪಿಟಸ್ ಕೋವಿಡ್-19 ಲಸಿಕೆ ಮಿಶ್ರಣ: ಹೆಟೆರೊಲೊಗಸ್ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಮೌಲ್ಯಮಾಪನದ ವರದಿಯನ್ನು medRxiv ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಇನ್ನಷ್ಟೇ ಪರಿಶೀಲನೆಗೊಳಪಡಬೇಕಿದೆ. 

"ವೈವಿಧ್ಯಮಯ ಪ್ರೈಮ್-ಬೂಸ್ಟ್ ಲಸಿಕೆಯ ಪರಿಣಾಮಗಳ ಬಗ್ಗೆ ಇದೇ ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದೆ". ಎಂದು ಸಂಶೋಧಕರು ಹೇಳಿದ್ದಾರೆ. 

ಭಾರತದಲ್ಲಿ ಕೋವಿಡ್-19 ಲಸಿಕೆಯ ಅಭಿಯಾನದಲ್ಲಿ ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆ ಕೋವಿಶೀಲ್ಡ್ ಹಾಗೂ ನಿಷ್ಕ್ರಿಯಗೊಂಡ ಸಂಪೂರ್ಣ ವೈರಿಯನ್ BBV152 ಕೋವ್ಯಾಕ್ಸಿನ್ ಬಳಕೆ ಮಾಡಲಾಗಿತ್ತು ಹಾಗೂ ಏಕರೂಪದ ಪ್ರಧಾನ-ವರ್ಧಕ ವಿಧಾನವನ್ನು ಅನುಸರಿಸಲಾಗಿತ್ತು.
 
ಆದರೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಪ್ರಮಾದವಶಾತ್ ಮೊದಲ ಡೋಸ್ ನಲ್ಲಿ ಕೋವಿಶೀಲ್ಡ್ ಲಸಿಕೆ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಲಸಿಕೆಯನ್ನು ಪಡೆದಿದ್ದರು. ಈ ವೇಳೆಗೆ ರಾಷ್ಟ್ರೀಯ ಮಟ್ಟದ ಲಸಿಕೆ ಅಭಿಯಾನ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿತ್ತು. ಮಿಶ್ರಿತ ಲಸಿಕೆಯನ್ನು ಪಡೆದಿದ್ದರಿಂದ ಮೊದಲೇ ಲಸಿಕೆ ಕುರಿತ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಅಧ್ಯಯನ ನಡೆಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com