ಮಾಜಿ ಸಂಸದೆ ಸುಷ್ಮಿತ ದೇವ್ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರ್ಪಡೆ

ಕಾಂಗ್ರೆಸ್ ತೊರೆದ ನಂತರ ಅಸ್ಸಾಂ ನ ಮಾಜಿ ಸಂಸದೆ ಸುಷ್ಮಿತಾ ದೇವ್ ಆ.16 ರಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. 
ಟಿಎಂಸಿ ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಸುಷ್ಮಿತ ಅವರನ್ನು ಸ್ವಾಗತಿಸುತ್ತಿರುವ ನಾಯಕರು
ಟಿಎಂಸಿ ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಸುಷ್ಮಿತ ಅವರನ್ನು ಸ್ವಾಗತಿಸುತ್ತಿರುವ ನಾಯಕರು
Updated on

ಕೋಲ್ಕತ್ತ: ಕಾಂಗ್ರೆಸ್ ತೊರೆದ ನಂತರ ಅಸ್ಸಾಂ ನ ಮಾಜಿ ಸಂಸದೆ ಸುಷ್ಮಿತಾ ದೇವ್ ಆ.16 ರಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. 

ಕೊಲ್ಕತ್ತಾದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಸುಷ್ಮಿತ ದೇವ್ ಟಿಎಂಸಿ ಗೆ ಸೇರ್ಪಡೆಯಾಗಿದ್ದಾರೆ. ಸುಷ್ಮಿತ ದೇವ್ ಕಾಂಗ್ರೆಸ್ ನ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು. ಆ.15 ರಂದು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದರು. ಟಿಎಂಸಿಯ ಹಿರಿಯ ನಾಯಕರೊಬ್ಬರು ಸುಷ್ಮಿತ ದೇವ್ ಅವರ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಷ್ಮಿತ ದೇವ್ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಸುಷ್ಮಿತ ದೇವ್ ಅವರ ರಾಜೀನಾಮೆ ಬಗ್ಗೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷ ಭುಪೇನ್ ಬೋರಾ ಪ್ರತಿಕ್ರಿಯೆ ನೀಡಿದ್ದು, "ಮಾಜಿ ಸಂಸದೆ ಸುಷ್ಮಿತ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಆದ್ದರಿಂದ ಅವರು ಪಕ್ಷ ತೊರೆದಿದ್ದಾರೆ" ಎಂದು ಹೇಳಿದ್ದಾರೆ. 

"ಪಕ್ಷದ ಹೈಕಮಾಂಡ್ ಅವರಿಗೆ ಸಾಕಷ್ಟು ಮಹತ್ವ ನೀಡಿತ್ತು. ಆದರೆ ರಾಜಕೀಯ ಕಾರಣಗಳಿಂದಾಗಿ ಅವರು ಪಕ್ಷಾಂತರ ಮಾಡಿರಬಹುದು" ಎಂದು ಭುಪೇನ್ ಬೋರಾ ಹೇಳಿದ್ದಾರೆ. "ಈ ರಾಜೀನಾಮೆ ಆಕೆಯ ಖಿನ್ನತೆಯ ಲಕ್ಷಣವಾಗಿರಬಹುದು, ಸುಷ್ಮಿತ ಅವರನ್ನು ನೋಡದೇ ಇದ್ದರೆ ಸೋಲು ಓರ್ವ ವ್ಯಕ್ತಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ, ಸಿಲ್ಚಾರ್ ನಲ್ಲಿ ಪಕ್ಷದವನ್ನು ಮರು ನಿರ್ಮಾಣ ಮಾಡುವುದಕ್ಕೆ ಆಕೆಯಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು" ಎಂದು ಭುಪೇನ್ ಬೋರಾ ಸುಷ್ಮಿತ ದೇವ್ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com