ರಾಹುಲ್, ಅಭಿಷೇಕ್ ಹೋಲಿಕೆ ಸರಿಯಲ್ಲ: ಸುಷ್ಮಿತಾ ದೇವ್

ಯಾವುದೇ ಷರತ್ತು ಇಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಮಾಜಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಹೇಳಿದ್ದಾರೆ. 
ಸುಷ್ಮಿತಾ ದೇವ್ ಟಿಎಂಸಿ ಸೇರ್ಪಡೆ ಕಾರ್ಯಕ್ರಮದ ಚಿತ್ರ
ಸುಷ್ಮಿತಾ ದೇವ್ ಟಿಎಂಸಿ ಸೇರ್ಪಡೆ ಕಾರ್ಯಕ್ರಮದ ಚಿತ್ರ
Updated on

ಕೊಲ್ಕತ್ತಾ: ಯಾವುದೇ ಷರತ್ತು ಇಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಮಾಜಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಹೇಳಿದ್ದಾರೆ. 

ಪಕ್ಷ ಸೇರ್ಪಡೆ ನಂತರ ಮೊದಲ ಬಾರಿಗೆ  ಪ್ರತಿಕ್ರಿಯಿಸಿರುವ ಸುಷ್ಮಿತಾ ದೇವ್, ಟಿಎಂಸಿ ಸೇರುವುದರೊಂದಿಗೆ ನನ್ನ ಸಿದ್ಧಾಂತವನ್ನು ರಾಜಿ ಮಾಡಿಕೊಂಡಿದ್ದೇನೆ ಎಂಬರ್ಥವಲ್ಲ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರ ಹೋಲಿಕೆ ಸರಿಯಲ್ಲ ಎಂದರು.

30 ವರ್ಷಗಳ ರಾಜಕೀಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಂದ ಯಾವುದೇ ಬೇಡಿಕೆ ಇಟ್ಟಿಲ್ಲ, ಇಲ್ಲಿಯೂ ಕೂಡಾ ಮಮತಾ ಬ್ಯಾನರ್ಜಿ ಅವರಿಂದ ನೀಡಲ್ಪಡುವ ಯಾವುದೇ ಹೊಣೆಯನ್ನು ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು. 

ಅಸ್ಸಾಂನ ಮಾಜಿ ಸಂಸತ್ ಸದಸ್ಯರಾಗಿರುವ ಸುಷ್ಮಿತ್ ದೇವ್ ಸೋಮವಾರ ಕೊಲ್ಕತ್ತಾದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com