ಹಿಂದೂಸ್ಥಾನ್-228 ವಿಮಾನ ಟ್ಯಾಕ್ಸಿ ಟ್ರಯಲ್ಸ್ ನಡೆಸಿದ ಹೆಚ್ಎಎಲ್

ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ  ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ. 
ಹೆಚ್ಎಎಲ್ ನ ವಿಮಾನದ ಮಾದರಿ (ಸಾಂಕೇತಿಕ ಚಿತ್ರ)
ಹೆಚ್ಎಎಲ್ ನ ವಿಮಾನದ ಮಾದರಿ (ಸಾಂಕೇತಿಕ ಚಿತ್ರ)
Updated on: 

ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ. 

ಡಿಜಿಸಿಎ ಮಾದರಿಯ ಪ್ರಮಾಣಪತ್ರಕ್ಕಾಗಿ ಈ ಟ್ರಯಲ್ ನಡೆದಿದ್ದು, ಇದು ಸಂಸ್ಥೆಯ ಕಾನ್ಪುರ ಸೌಲಭ್ಯದ 75 ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಗ ಎಂದು ಹೆಚ್ಎಎಲ್ ನ ಪರಿಕರಗಳ ಸಂಕೀರ್ಣ ವಿಭಾಗದ ಸಿಇಒ ಸಜಲ್ ಪ್ರಕಾಶ್ ಹೇಳಿದ್ದಾರೆ. 

ಪ್ರಾದೇಶಿಕ ವೈಮಾನಿಕ ಸಂಪರ್ಕವನ್ನು ಬಲಪಡಿಸುವುದಕ್ಕೆ ಹಾಗೂ ಮೊದಲ ಸ್ಥಿರ-ವಿಂಗ್ ಮೇಡ್ ಇನ್ ಇಂಡಿಯಾ ನಾಗರಿಕ ವಿಮಾನದ ಮಟ್ಟಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ. 

"ರಾಜ್ಯದ ಒಳಗೆ ಹಾಗೂ ಅಂತಾರಾಜ್ಯ ಸಂಚಾರಕ್ಕಾಗಿ ಸರ್ಕಾರಗಳು ಹಾಗೂ ಸಿವಿಲ್ ಆಪರೇಟರ್ ಗಳಿಗೆ ಈ ಟಾಕ್ಸಿ ವಿಮಾನ ಉಪಯೋಗವಾಗಲಿದೆ" ಎಂದು ಹೆಚ್ಎಎಲ್ ಹೇಳಿದೆ.

ಹಿಂದೂಸ್ಥಾನ್-228 19 ಸೀಟ್ ಇರುವ ಬಹು ಉಪಯೋಗಿ ವಿಮಾನವಾಗಿದ್ದು ವಿಐಪಿ ಸಾರಿಗೆ, ಪ್ರಯಾಣಿಕ ಸಾರಿಗೆ ಏರ್ ಆಂಬುಲೆನ್ಸ್, ವೈಮಾನಿಕ ಸಮೀಕ್ಷೆ, ಮೋಡ ಬಿತ್ತನೆ ಸೇರಿದಂತೆ ಹಲವು ರೀತಿಯ ಚಟುವಟಿಕೆಗಳಿಗೆ ನೆರವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com