ದೇಶ
ಕಾಬೂಲ್ ನಿಂದ 120 ಭಾರತೀಯ ಅಧಿಕಾರಿಗಳನ್ನು ಹೊತ್ತ ಐಎಎಫ್ ವಿಮಾನ ಗುಜರಾತ್ ನ ಜಾಮ್ ನಗರಕ್ಕೆ ಆಗಮನ
ಆಫ್ಘಾನಿಸ್ತಾನದಿಂದ 120 ಭಾರತೀಯ ಅಧಿಕಾರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಗುಜರಾತ್ ನ ಜಾಮ್ ನಗರವನ್ನು ತಲುಪಿಸಿದೆ ಎಂದು ಮೂಲಗಳು ಮಂಗಳವಾರ ಖಚಿತಪಡಿಸಿವೆ.
ನವದೆಹಲಿ: ಆಫ್ಘಾನಿಸ್ತಾನದಿಂದ 120 ಭಾರತೀಯ ಅಧಿಕಾರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಗುಜರಾತ್ ನ ಜಾಮ್ ನಗರವನ್ನು ತಲುಪಿಸಿದೆ ಎಂದು ಮೂಲಗಳು ಮಂಗಳವಾರ ಖಚಿತಪಡಿಸಿವೆ.
ಇದಕ್ಕೂ ಮುನ್ನ ಆಫ್ಘಾನ್ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಬೂಲ್ ನಲ್ಲಿದ್ದ ಭಾರತೀಯ ರಾಯಭಾರಿ ಸೇರಿದಂತೆ ಅಧಿಕಾರಿಗಳನ್ನು ಕೂಡಲೇ ಸ್ಥಳಾಂತರಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿತ್ತು.
ತುರ್ತು ಪರಿಸ್ಥಿತಿ ಕಾರಣಕ್ಕೆ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಮತ್ತು ಅವರ ಭಾರತೀಯ ಸಿಬ್ಬಂದಿಯನ್ನು ಕೂಡಲೇ ಭಾರತಕ್ಕೆ ಕರೆತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಟ್ವೀಟ್ ಮಾಡಿದ್ದರು.
ಆಫ್ಘಾನಿಸ್ತಾನದಲ್ಲಿನ ಕ್ಷೀಪ್ರಗತಿಯ ಪರಿಸ್ಥಿತಿಯನ್ನು ಗಮನಿಸುತ್ತಿರುವ ಭಾರತ, ಕಾಬೂಲಿನಿಂದ ರಾಯಭಾರಿ ಅಧಿಕಾರಿಗಳನ್ನು ಸ್ಥಳಾಂತರಿಸುತ್ತಿರುವುದಾಗಿ ಹೇಳಲಾಗಿತ್ತು.