ಉತ್ತರಾಖಂಡ್ ಚುನಾವಣೆ: ಮಾಜಿ ಸೈನಿಕ ಅಜಯ್ ಕೊತಿಯಾಲ್ ಎಎಪಿ ಸಿಎಂ ಅಭ್ಯರ್ಥಿ; ಕೇಜ್ರಿವಾಲ್ ಘೋಷಣೆ

2022ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮಾಜಿ ಸೈನಿಕ ಅಜಯ್ ಕೊತಿಯಾಲ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ.
ಅಜಯ್ ಕೊತಿಯಾಲ್
ಅಜಯ್ ಕೊತಿಯಾಲ್
Updated on

ಡೆಹ್ರಾಡೂನ್: 2022ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮಾಜಿ ಸೈನಿಕ ಅಜಯ್ ಕೊತಿಯಾಲ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಘೋಷಿಸಿದ್ದಾರೆ.

ರಾಜ್ಯ ರಾಜಕಾರಣಿಗಳ ವರ್ತನೆಯಿಂದ ಬೇಸರಗೊಂಡಿರುವ ಜನರಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ಕೊತಿಯಾಲ್ ಅವರನ್ನು 
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇಲ್ಲಿನ ಜನರು ರಾಜ್ಯವನ್ನು ಲೂಟಿ ಮಾಡಿದ ರಾಜಕಾರಣಿಗಳಿಂದ ಮುಕ್ತಿ ಪಡೆಯಲು ಬಯಸುತ್ತಾರೆ. ಅವರು ಈಗ ಒಬ್ಬ ಸೇನಾಪತಿಯು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ. ಅವರು ತನ್ನ ಅಧಿಕಾರವನ್ನು ತನ್ನ ಖಜಾನೆ ತುಂಬಿಕೊಳ್ಳಲು ಖರ್ಚು ಮಾಡದೆ ಜನರ ಸೇವೆ ಮಾಡುತ್ತಾರೆ" ಎಂದು ದೆಹಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಆಮ್ ಆದ್ಮಿ ಪಕ್ಷ, ಕೊತಿಯಾಲ್ ನೇತೃತ್ವದಲ್ಲಿ ಉತ್ತರಾಖಂಡವನ್ನು ಹಿಂದೂಗಳಿಗೆ ಜಾಗತಿಕ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುತ್ತದೆ ಮತ್ತು ರಾಜ್ಯದ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com