ಮರಗಳಿಗೆ ರಾಖಿ ಕಟ್ಟುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್
ದೇಶ
ರಕ್ಷಾ ಬಂಧನ್: ಮರಗಳಿಗೆ ರಾಖಿ ಕಟ್ಟಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್!
ರಕ್ಷಾ ಬಂಧನ್ ಆಚರಣೆ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜೆಡಿಯು ಪಕ್ಷದ ಮುಖ್ಯಸ್ಥರು ಆಗಿರುವ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ.
ಪಾಟ್ನಾ: ರಕ್ಷಾ ಬಂಧನ್ ಆಚರಣೆ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜೆಡಿಯು ಪಕ್ಷದ ಮುಖ್ಯಸ್ಥರು ಆಗಿರುವ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ.
ಬಿಹಾರದಲ್ಲಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ 2021ರಿಂದಲೂ ರಕ್ಷಾ ಬಂಧನ್ ಹಬ್ಬವನ್ನು 'ವೃಕ್ಷ ರಕ್ಷಾ ದಿವಸ್ ' ಆಗಿ ಎನ್ ಡಿಎ ನೇತೃತ್ವದ ಬಿಹಾರ ಸರ್ಕಾರ ಆಚರಿಸಿಕೊಂಡು ಬಂದಿದ್ದು, ಜನರು ಸಸಿಗಳನ್ನು ನೆಟ್ಟು, ಅವುಗಳನ್ನು ಕಾಪಾಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕೆಂದು ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಜನರನ್ನು ಕಾಪಾಡುವಂತೆ ಮರಗಳನ್ನು ರಕ್ಷಿಸಬೇಕಾಗಿದೆ. ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕಾಗಿದೆ. ಜಲ ಜೀವನ್ ಹರಿಯಾಲಿ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ ಸಸಿಗಳನ್ನು ನೆಡುವತ್ತಾ ಗಮನ ಕೇಂದ್ರೀಕರಿಸಿದೆ. ಮುಂದಿನ ಪೀಳಿಗೆಯು ಇದೀಗ ಪರಿಸರ ಸಂರಕ್ಷಣೆಯನ್ನು ಅರಿಯಬೇಕಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ