ಕಬ್ಬಿನ ಬೆಲೆ ಏರಿಕೆಗೆ ಕೇಂದ್ರ ಸಂಪುಟ ಒಪ್ಪಿಗೆ, ಸಕ್ಕರೆ ಬೆಲೆ ಯಥಾಸ್ಥಿತಿ

ಕಬ್ಬಿನ ಮೇಲಿನ ಬೆಂಬಲ ಬೆಲೆಯನ್ನು(ಎಫ್‌ಆರ್‌ಪಿ) ಪ್ರತಿ ಕ್ವಿಂಟಾಲ್‌ಗೆ 290 ರೂಪಾಯಿಗೆ  ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಆದರೆ, ಇದು ಸಕ್ಕರೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ...
ಕೇಂದ್ರ ಸಚಿವ ಪಿಯೂಷ್ ಗೋಯಲ್
ಕೇಂದ್ರ ಸಚಿವ ಪಿಯೂಷ್ ಗೋಯಲ್
Updated on: 

ನವದೆಹಲಿ: ಕಬ್ಬಿನ ಮೇಲಿನ ಬೆಂಬಲ ಬೆಲೆಯನ್ನು(ಎಫ್‌ಆರ್‌ಪಿ) ಪ್ರತಿ ಕ್ವಿಂಟಾಲ್‌ಗೆ 290 ರೂಪಾಯಿಗೆ  ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಆದರೆ, ಇದು ಸಕ್ಕರೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಾಲ್‌ಗೆ 290 ರೂ.ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

2020ರ ಆಗಸ್ಟ್‌ನಲ್ಲಿ ಪ್ರತಿ ಕ್ವಿಂಟಾಲ್‌ಗೆ 5 ರೂ. ಅಂದರೆ 285 ರೂ.ಗೆ ಹೆಚ್ಚಿಸಲಾಗಿತ್ತು. 2019-2020 ರಲ್ಲಿ ನಿಗದಿಪಡಿಸಿದ ಬೆಲೆ ಪ್ರತಿ ಕ್ವಿಂಟಾಲ್‌ಗೆ 105 ರೂ.ಗಳಷ್ಟಿತ್ತು.

"ಕಳೆದ ವರ್ಷವೂ ರಫ್ತು ದಾಖಲೆ ಮಟ್ಟದಲ್ಲಿತ್ತು. ನಮ್ಮ ದೇಶ 70 ಲಕ್ಷ ಟನ್ ಕಬ್ಬು ರಫ್ತು ಮಾಡುವ ಒಪ್ಪಂದ ಮಾಡಿಕೊಂಡಿದೆ, ಅದರಲ್ಲಿ 55 ಲಕ್ಷ ಟನ್ ಈಗಾಗಲೇ ರಫ್ತಾಗಿದೆ ಮತ್ತು ಉಳಿದ 15 ಲಕ್ಷ ಟನ್ ರಫ್ತು ಮಾಡಲಾಗುತ್ತಿದೆ" ಕೇಂದ್ರ ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com