ಸಚಿವರು ಮತ್ತು ಸಂಸದರ ಮೂಲಕ ವರ್ಗಾವಣೆ ಶಿಫಾರಸು ತಂದರೆ ಕ್ರಮ: ಸಹಾಯಕ ಸೆಕ್ಷನ್ ಅಧಿಕಾರಿಗಳಿಗೆ ಕೇಂದ್ರ ಎಚ್ಚರಿಕೆ

ಸಿಬ್ಬಂದಿ ಮತ್ತು ತರಬೇತಿ (DoPT) ವಿಭಾಗದ ಮುಖ್ಯಸ್ಥರು, ವೈಯಕ್ತಿಕ ಮತ್ತು ಮೆಡಿಕಲ್ ಗ್ರೌಂಡ್ಸ್ ನಲ್ಲಿ ವರ್ಗಾವಣೆ ಕೋರಿದ ಮನವಿ ಪತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದಿರುವುದಾಗಿ ತಿಳಿಸಿದ್ದರು.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್(CSS) ಅಡಿ ಸಹಾಯಕ ಸೆಕ್ಷನ್ ಅಧಿಕಾರಿಗಳಾಗಿ (ASO) ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸಚಿವರು ಮತ್ತು ಸಂಸದರ ಮೂಲಕ ವರ್ಗಾವಣೆ ಶಿಫಾರಸು ತಂದ ಸಹಾಯಕ ಸೆಕ್ಷನ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ.

ಇದಕ್ಕೂ ಮುನ್ನ ಸಿಬ್ಬಂದಿ ಮತ್ತು ತರಬೇತಿ (DoPT) ವಿಭಾಗದ ಮುಖ್ಯಸ್ಥರು, ವೈಯಕ್ತಿಕ ಮತ್ತು ಮೆಡಿಕಲ್ ಗ್ರೌಂಡ್ಸ್ ನಲ್ಲಿ ವರ್ಗಾವಣೆ ಕೋರಿದ ಮನವಿ ಪತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದಿರುವುದಾಗಿ ತಿಳಿಸಿದ್ದರು. 

ಹೆಚ್ಚಿನ ವೇಳೆ ಅಧಿಕಾರಿಗಳ ವರ್ಗಾವಣೆ ಮನವಿಗಳನ್ನು ಸಚಿವರೇ ಶಿಫಾರಸು ಮಾಡುತ್ತಿರುವುದಾಗಿ ತಿಳಿದುಬಂದಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಈ ಎಚ್ಚರಿಕೆ ನೀಡಿದೆ. ಯಾವುದೇ ಸರ್ಕಾರಿ ನೌಕರ ರಾಜಕೀಯ ಅಥವಾ ಬಾಹ್ಯ ಒತ್ತಡವನ್ನು ಹೇರುವ ಹಾಗಿಲ್ಲ ಎಂದು ಕಾನೂನಿನಲ್ಲಿ ಹೇಳಲಾಗಿದೆ. ಅದನ್ನು ಉದಾಹರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com