ಪಂಜಾಬ್: ಹೊಸ ಪಕ್ಷ 'ಸಂಯುಕ್ತ ಸಂಘರ್ಷ ಪಕ್ಷ' ಘೋಷಣೆ ಮಾಡಿದ ರೈತ ನಾಯಕ ಗುರ್ನಾಮ್ ಸಿಂಗ್ ಚದುನಿ

ರೈತ ಮುಖಂಡ ಗುರ್ನಾಮ್ ಸಿಂಗ್ ಚದುನಿ ಹೊಸ ರಾಜಕೀಯ ಪಕ್ಷ ಆರಂಭಿಸಿದ್ದಾರೆ. ಅದರ ಹೆಸರು ಸಂಯುಕ್ತ ಸಂಘರ್ಷ ಪಕ್ಷವಾಗಿದ್ದು ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿಕೊಂಡಿದ್ದಾರೆ.
ಪ್ರತಿಭಟನೆ ಕೊನೆಗೊಳಿಸಿದ್ದ ಸಂದರ್ಭದಲ್ಲಿ ರೈತ ಮುಖಂಡರು ಸಿಹಿ ತಿಂದು ಖುಷಿ ಹಂಚಿಕೊಂಡಿದ್ದು
ಪ್ರತಿಭಟನೆ ಕೊನೆಗೊಳಿಸಿದ್ದ ಸಂದರ್ಭದಲ್ಲಿ ರೈತ ಮುಖಂಡರು ಸಿಹಿ ತಿಂದು ಖುಷಿ ಹಂಚಿಕೊಂಡಿದ್ದು

ಚಂಡೀಗಢ:ರೈತ ಮುಖಂಡ ಗುರ್ನಾಮ್ ಸಿಂಗ್ ಚದುನಿ ಹೊಸ ರಾಜಕೀಯ ಪಕ್ಷ ಆರಂಭಿಸಿದ್ದಾರೆ. ಅದರ ಹೆಸರು ಸಂಯುಕ್ತ ಸಂಘರ್ಷ ಪಕ್ಷವಾಗಿದ್ದು ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿಕೊಂಡಿದ್ದಾರೆ.

ಚದುನಿಯವರು ಸಂಯುಕ್ತ ಕಿಸಾನ್ ಮೋರ್ಚ(SKM)ದ ಸದಸ್ಯರಾಗಿದ್ದು ಅದು 40 ರೈತ ಸಂಘಟನೆಗಳ ಶಾಖೆಯಾಗಿದೆ. ಇದರ ನೇತೃತ್ವದಲ್ಲಿ ದೆಹಲಿ ಗಡಿಭಾಗದಲ್ಲಿ ಕಳೆದ ಒಂದು ವರ್ಷ ಕೇಂದ್ರ ಸರ್ಕಾರದ ತಿದ್ದುಪಡಿ ರೈತ ಮಸೂದೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು.

ಇಂದು ಚಂಡೀಗಢದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಸಯುಕ್ತ ಸಂಘರ್ಷ ಪಕ್ಷವನ್ನು ಆರಂಭಿಸುತ್ತಿದ್ದೇವೆ. ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಗುರ್ನಾಮ್ ಸಿಂಗ್ ಚದುನಿ ಹೇಳಿದರು. 

ರಾಜಕೀಯವನ್ನು ಶುದ್ಧಗೊಳಿಸಿ ಉತ್ತಮ ಪ್ರಜೆಗಳನ್ನು ಮುಂದೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ಹರ್ಯಾಣ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರೂ ಆಗಿರುವ ಗುರ್ನಾಮ್ ಹೇಳಿದರು.

ಬಡವರ ಹಿತಾಸಕ್ತಿಗಳನ್ನು ಕಡೆಗಣಿಸಿ ಬಂಡವಾಳಶಾಹಿಗಾರರ ಪರವಾದ ನೀತಿಗಳನ್ನು ಸರ್ಕಾರಗಳು ತರುತ್ತವೆ, ನಮ್ಮ ಪಕ್ಷ ಬಡವರ ಪರವಾಗಿರುತ್ತದೆ, ಸಂಯುಕ್ತ ಸಂಘರ್ಷ ಪಕ್ಷ ಜಾತ್ಯತೀತವಾಗಿದ್ದು ಸಮಾಜದ ಎಲ್ಲಾ ವರ್ಗದವರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.

ಆದರೆ ತಾವು ಮಾತ್ರ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ತಮ್ಮ ಪಕ್ಷ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತದೆ ಎಂದರು. 

ಮಿಷನ್ ಪಂಜಾಬ್ ಬಗ್ಗೆ ಮಾತನಾಡಿದ್ದ ಚಾದುನಿ ರೈತ ಸಂಘಟನೆಗಳನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com