ದೆಹಲಿಯಲ್ಲಿ ಎಲ್ಲಾ ಕೋವಿಡ್-19 ಪ್ರಕರಣಗಳ ಜಿನೋಮ್ ಸೀಕ್ವೆನ್ಸಿಂಗ್: ಎಲ್ಲಾ ಅರ್ಹರಿಗೂ ಕನಿಷ್ಟ 1 ಡೋಸ್ ಲಸಿಕೆ
ನವದೆಹಲಿ: ಸಮುದಾಯದಲ್ಲಿ ಕೋವಿಡ್-19 ನ ಹೊಸ ರೂಪಾಂತರಿ ಓಮಿಕ್ರಾನ್ ಹರಡಿದೆಯೇ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ದೆಹಲಿಯಲ್ಲಿ ಎಲ್ಲಾ ಕೋವಿಡ್-19 ಪ್ರಕರಣಗಳ ಸ್ಯಾಂಪಲ್ ಗಳ ಜಿನೋಮ್ ಸೀಕ್ವೆನ್ಸಿಂಗ್ ನ್ನು ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಪ್ರತಿ ದಿನ 100-125 ಪ್ರಕರಣಗಳು ದೆಹಲಿಯಲ್ಲಿ ಪತ್ತೆಯಾಗುತ್ತಿದ್ದು, ದಿನವೊಂದಕ್ಕೆ 400-500 ಸ್ಯಾಂಪಲ್ ಗಳ ಜಿನೋಮ್ ಸೀಕ್ವೆನ್ಸಿಂಗ್ ಸಾಮರ್ಥ್ಯ ಮಾತ್ರ ಇದೆ.
"ಲೋಕ್ ನಾಯಕ್ ಆಸ್ಪತ್ರೆಯಲ್ಲಿ ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯ ಹಾಗೂ ಇನ್ಸ್ಟಿಟ್ಯೂಟ್ ಆಫ್ ಲಿವರ್ ಹಾಗೂ ಬೈಲಿಯರಿ ಸೈನ್ಸಸ್ ನಲ್ಲಿ ದಿನವೊಂದಕ್ಕೆ 100 ಸ್ಯಾಂಪಲ್ ಗಳನ್ನು ಸೀಕ್ವೆನ್ಸಿಂಗ್ ಗೆ ಒಳಪಡಿಸಬಹುದಾಗಿದೆ. ಕೇಂದ್ರದಿಂದ ನಿರ್ವಹಣೆಯಾಗುತ್ತಿರುವ ಪ್ರಯೋಗಾಲಯದಲ್ಲಿ 200-300 ಸ್ಯಾಂಪಲ್ ಗಳನ್ನು ದಿನವೊಂದಕ್ಕೆ ಸೀಕ್ವೆನ್ಸಿಂಗ್ ಗೆ ಒಳಪಡಿಸಬಹುದಾಗಿದೆ. ಒಟ್ಟಾರೆ 400-500 ಮಾದರಿಗಳನ್ನು ಸೀಕ್ವೆನ್ಸಿಂಗ್ ಗೆ ಒಳಪಡಿಸಬಹುದಾಗಿದೆ" ಎಂದು ಜೈನ್ ಮಾಹಿತಿ ನೀಡಿದ್ದಾರೆ.
ದಿನವೊಂದಕ್ಕೆ 100-125 ಹೊಸ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಿದೆ. ಕೋವಿಡ್-19 ನ ಎಲ್ಲಾ ಸ್ಯಾಂಪಲ್ ಗಳನ್ನೂ ಬುಧವಾರದಿಂದ ಸೀಕ್ವೆನ್ಸಿಂಗ್ ಗೆ ಕಳಿಸಲಾಗುತ್ತದೆ. ಮೂವರು ಓಮಿಕ್ರಾನ್ ರೋಗಿಗಳಿಗೆ ಪ್ರಯಾಣದ ಇತಿಹಾಸ ಇಲ್ಲ ಎಂದು ಜೈನ್ ಮಂಗಳವಾರ ಹೇಳಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 57 ಓಮಿಕ್ರಾನ್ ಪ್ರಕರಣಗಳು ಪತ್ತೆಯವಾಗಿವೆ. ಈ ಪೈಕಿ 18 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ