ಯೂಟ್ಯೂಬ್ ಸುದ್ದಿ ವಾಹಿನಿಗಳಿಗೆ ಶಾಕ್ ನೀಡಲು ತೆಲಂಗಾಣ ಸರ್ಕಾರ ಚಿಂತನೆ

ಸಿಎಂ ಕೆಸಿಆರ್ ಮೊಮ್ಮಗನ ವಿರುದ್ಧ ಯೂಟ್ಯೂಬ್ ಚಾನೆಲ್ ನಲ್ಲಿ ಆಕ್ಷೇಪಾರ್ಹ ಟೀಕೆಗಳು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ನಿರ್ದೇಶನದಂತೆ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆ ಕಸರತ್ತು ಆರಂಭಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೈದರಬಾದ್: ತೆಲಂಗಾಣದಲ್ಲಿ ಯೂಟ್ಯೂಬ್ ಸುದ್ದಿವಾಹಿನಿಗಳ ಹಾವಳಿ ಹೆಚ್ಚಾಗುತ್ತಿದ್ದು ಆಕ್ಷೇಪಾರ್ಹ ಪ್ರಸಾರಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ರಸಾರ ಮಾಡುತ್ತಿವೆ. ಸುಳ್ಳು ಮತ್ತು ದ್ವೇಷಪೂರಿತ ಸುದ್ದಿಗಳನ್ನು ಬಿತ್ತರಿಸುತ್ತಿವೆ.  ಧರ್ಮ, ಜಾತಿಗಳ ಭಾವನೆಗಳಿಗೆ ಧಕ್ಕೆ ತರುವ ಜತೆಗೆ ಕೆಲವರನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ವರ್ತಿಸುವ ವಾಹಿನಿಗಳನ್ನು ನಿಯಂತ್ರಿಸಲು ಕಡಿವಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಿಎಂ ಕೆಸಿಆರ್ ಮೊಮ್ಮಗನ ವಿರುದ್ಧ ಯೂಟ್ಯೂಬ್ ಚಾನೆಲ್ ನಲ್ಲಿ ಆಕ್ಷೇಪಾರ್ಹ ಟೀಕೆಗಳು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ನಿರ್ದೇಶನದಂತೆ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆ ಕಸರತ್ತು ಆರಂಭಿಸಿದೆ.

ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಬೇಕು: ಕೇಂದ್ರ ಸರ್ಕಾರ ಇದೆ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳ ಮತ್ತು ಸುದ್ದಿ ವಾಹಿನಿಗಳಿಗಾಗಿ ಮಾಹಿತಿ ತಂತ್ರಜ್ಞಾನ ( Intermediary Guidelines and Digital Media Ethics Code ) ನಿಯಮಗಳು – 2021 ಯನ್ನು ಜಾರಿಗೆ ತಂದಿತ್ತು. ಅದರಂತೆ ಯೂಟ್ಯೂಬ್ ಮತ್ತು ಇತರ ಆನ್‌ಲೈನ್ ಸುದ್ದಿ ವಾಹಿನಿಗಳಲ್ಲಿ ಸುಳ್ಳು ಮತ್ತು ದ್ವೇಷಪೂರಿತ ಸುದ್ದಿಗಳ ಪ್ರಸಾರ ಮಾಡಿದರೆ ಇದಕ್ಕೆ ಆಯಾ ಚಾನೆಲ್‌ಗಳು ಹೊಣೆಯಾಗಿರುತ್ತವೆ. ಸುದ್ದಿ ಪ್ರಸಾರದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸುವ ಮತ್ತು ಗರಿಷ್ಠ 15 ದಿನಗಳಲ್ಲಿ ಅವುಗಳನ್ನು ಪರಿಹರಿಸುವ ಜವಾಬ್ದಾರಿ ಆಯ ಯೂಟ್ಯೂಬ್ ಚಾನಲ್ ಗಳದ್ದೆ ಆಗಿರುತ್ತದೆ.

ರಾಜ್ಯದಲ್ಲಿ ಸುಮಾರು 200 ಯೂಟ್ಯೂಬ್ ಸುದ್ದಿ ವಾಹಿನಿಗಳಿದ್ದು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಐಟಿ ಇಲಾಖೆಯು ಎಲ್ಲಾ ಯೂಟ್ಯೂಬ್ ಸುದ್ದಿ ಚಾನೆಲ್‌ಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ದೂರುಗಳನ್ನು ಸ್ವೀಕರಿಸಲು, ಪ್ರತಿ ಚಾನೆಲ್ ತನ್ನ ಕಚೇರಿ ವಿಳಾಸ, ಪ್ರತಿನಿಧಿ ಹೆಸರು ಮತ್ತು ಬೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಐಟಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಪತ್ರಿಕೋದ್ಯಮದ ಜ್ಞಾನವಿಲ್ಲದವರೂ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳು ಮತ್ತು ನಿಯಮಗಳ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಐಟಿ ಇಲಾಖೆ ಅಭಿಪ್ರಾಯಪಟ್ಟಿದೆ.

ಶೀಘ್ರದಲ್ಲೇ ವಾಹಿನಿ ನಿರ್ವಾಹಕರೊಂದಿಗೆ ಸಭೆ ನಡೆಸಿ ಷರತ್ತುಗಳನ್ನು ವಿವರಿಸಲಾಗುವುದು. ನಂತರವೂ ಯೂಟ್ಯೂಬ್ ಚಾನಲ್ ಗಳು ಯಾವುದೇ ನಿಯಮಗಳನ್ನ ಪಾಲಿಸುತ್ತಿಲ್ಲ ಎಂದು ತಿಳಿದರೇ ಅಂಥ ಚಾನಲ್ ಅನ್ನು ಅಮಾನತುಗೊಳಿಸುವಂತೆ ಸರ್ಕಾರದ ಪರವಾಗಿ ಯೂಟ್ಯೂಬ್ ಸಂಸ್ಥೆಗೆ ಪತ್ರ ಬರೆಯಲಾಗುವುದು. ರಾಜ್ಯದ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಒತ್ತಾಯಿಸಿ ಇಂದು ಯೂಟ್ಯೂಬ್‌ಗೆ ಪತ್ರ ಬರೆಯಲಾಗುವುದು ಎಂದು ಐಟಿ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com