ಪಂಜಾಬ್: ಕಾಂಗ್ರೆಸ್ ನ 2, ಅಕಾಲಿ ದಳದ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ವಿಧಾನಸಭೆಗೆ ಸಜ್ಜುಗೊಂಡಿರುವ ಪಂಜಾಬ್ ನಲ್ಲಿ ಕಾಂಗ್ರೆಸ್ ನ ಇಬ್ಬರು ಶಾಸಕರು ಹಾಗೂ ಅಕಾಲಿ ದಳದ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದೆ. 
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಾಕರು
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಾಕರು

ನವದೆಹಲಿ: ವಿಧಾನಸಭೆಗೆ ಸಜ್ಜುಗೊಂಡಿರುವ ಪಂಜಾಬ್ ನಲ್ಲಿ ಕಾಂಗ್ರೆಸ್ ನ ಇಬ್ಬರು ಶಾಸಕರು ಹಾಗೂ ಅಕಾಲಿ ದಳದ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದೆ. 

ಚುನಾವಣೆಯ ಸನಿಹದಲ್ಲಿ ಎರಡೂ ಪಕ್ಷಗಳಿಗೆ ಈ ಬೆಳವಣಿಗೆ ಅಘಾತ ಉಂಟುಮಾಡಿದೆ. ಕಾಂಗ್ರೆಸ್ ನ ಮಾಜಿ ಶಾಸಕ ಫತೇಜ್ ಬಾಜ್ವಾ,  ಕಾಂಗ್ರೆಸ್ ನ ಮತ್ತೋರ್ವ ಶಾಸಕ ಹರ್ಗೋವಿಂದ್ ಪುರದ ಬಲ್ವಿಂದರ್ ಸಿಂಗ್ ಲಡ್ಡಿ, ಅಕಾಲಿ ದಳದ ಮಾಜಿ ಶಾಸಕ ದಲ್ ಗುರ್ಜೀತ್ ಸಿಂಗ್ ಗುಧಿಯಾನ, ಯುನೈಟೆಡ್ ಅಕಾಲಿ ದಳದ ಮಾಜಿ ಸಂಸದ ರಾಜ್ ದೇವ್ ಸಿಂಗ್ ಖಾಲ್ಸ, ಪಂಜಾಬ್ ಹರ್ಯಾಣ ಹೈಕೋರ್ಟ್ ನ ನಿವೃತ್ತ ಎಡಿಸಿ ಹಾಗೂ ಅಡ್ವೊಕೇಟ್ ಮಧುಮೀತ್ ಡಿ.28 ರಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ಬಿಜೆಪಿ ಸೇರಿರುವ ಫತೇಹ್ ಜಂಗ್ ಸಿಂಗ್ ಬಾಜ್ವಾ ಕಾಂಗ್ರೆಸ್ ನ ಹಿರಿಯ ನಾಯಕ, ಸಂಸದ ಪ್ರತಾಪ್ ಬಾಜ್ವಾ ಅವರ ಸಹೋದರರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com