ಪಂಜಾಬ್: ಚಂಡೀಗಢ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಎಎಪಿಗೆ ಗೆಲುವು, ಬಿಜೆಪಿಗೆ 2ನೇ ಸ್ಥಾನ!

ಚಂಡೀಗಡ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬಿಜೆಪಿ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಜಯಭೇರಿ ಬಾರಿಸಿದೆ.
ಕೇಜ್ರಿವಾಲ್
ಕೇಜ್ರಿವಾಲ್

ಚಂಡೀಗಡ: ಚಂಡೀಗಡ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬಿಜೆಪಿ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಜಯಭೇರಿ ಬಾರಿಸಿದೆ.

ಪಂಜಾಬಿನ ವಿಧಾನಸಭೆ ಚುನಾವಣೆ ಮುನ್ನವೇ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಆಪ್ ಪಕ್ಷವು 35 ವಾರ್ಡ್‍ಗಳಲ್ಲಿ 14 ವಾರ್ಡ್‍ಗಳಲ್ಲಿ ಜಯಗಳಿಸಿದೆ.

ಕಳೆದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ 26 ವಾರ್ಡ್‍ಗಳ ಪೈಕಿ 21ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 12 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ ಎಂಟು ವಾರ್ಡ್‍ಗಳಲ್ಲಿ ಮತ್ತು ಅಕಾಲಿದಳ 1ರಲ್ಲಿ ಗೆಲುವು ಸಾಧಿಸಿದೆ.

ಕಳೆದ ಬಾರಿ 26 ಇದ್ದ ವಾರ್ಡ್‍ಗಳ ಸಂಖ್ಯೆ ಈಗ 35ಕ್ಕೆ ಏರಿದೆ. ಆಪ್ ಪಕ್ಷದಿಂದ ಮೇಯರ್ ಆಯ್ಕೆಯಾಗಬೇಕಾದರೆ ಆಪ್ ಪಕ್ಷಕ್ಕೆ 19 ಕಾರ್ಪೋರೇಟರ್‍ಗಳ ಬೆಂಬಲ ಬೇಕಾಗಿದೆ. ಚಂಡೀಗಢ ಸಂಸದರು ಬಿಜೆಪಿಗೆ ಸೇರಿರುವುದರಿಂದ ಬಿಜೆಪಿಗೆ 18 ಮಂದಿಯ ಬೆಂಬಲ ಅಗತ್ಯವಿದೆ.

ಬಿಜೆಪಿಯ ಹಾಲಿ ಮೇಯರ್ ರವಿಕಾಂತ್ ಶರ್ಮಾರನ್ನು ಎಎಪಿ ಅಭ್ಯರ್ಥಿ ದಮನ್ಪ್ರೀತ್ ಸಿಂಗ್ ರನ್ನು ಸೋಲಿಸಿದ್ದಾರೆ. 

ಎಎಪಿಯ ನೇಹಾ ಮುಸಾವತ್ (25) ವಾರ್ಡ್ ಸಂಖ್ಯೆ 19 ರಿಂದ ಗೆದ್ದಿರುವ ಅತ್ಯಂತ ಕಿರಿಯ ಅಭ್ಯರ್ಥಿ ಎಂದೆನಿಸಿಕೊಂಡಿದ್ದಾರೆ. ಎಎಪಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಮತ್ತು ಕಡಿಮೆ ಪ್ರಚಾರವನ್ನು ನಡೆಸಿದರೂ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಎಎಪಿ ಸೋಲಿಸಲು ಬಿಜೆಪಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳಿದರೂ ಯಾವುದೇ ಪ್ರಯೋಜನವಾಗದೆ ಎಎಪಿ ಎದುರು ಮುಗ್ಗರಿಸಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com