ಪಂಜಾಬ್ ಚುನಾವಣೆ: ಒಂದು ಕುಂಟುಬಕ್ಕೆ ಒಂದೇ ಟಿಕೆಟ್; ಕಾಂಗ್ರೆಸ್ ಮಹತ್ವದ ನಿರ್ಧಾರ

ತೀವ್ರ ಕುತೂಹಲ ಕೆರಳಿಸಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಒಂದು ಕುಂಟಬಕ್ಕೆ ಒಂದೇ ಟಿಕೆಟ್ ನೀಡುವ ನೀತಿಯನ್ನು ಜಾರಿಗೆ ತಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಗಢ: ತೀವ್ರ ಕುತೂಹಲ ಕೆರಳಿಸಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಒಂದು ಕುಂಟಬಕ್ಕೆ ಒಂದೇ ಟಿಕೆಟ್ ನೀಡುವ ನೀತಿಯನ್ನು ಜಾರಿಗೆ ತಂದಿದೆ.

ಹೌದು.. ಪಂಜಾಬಿನ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಒಂದು ಕುಟುಂಬ, ಒಂದು ಟಿಕೆಟ್ ನಿಯಮ ರೂಪಿಸಲು ನಿರ್ಧರಿಸಿದ್ದು, ಈ ಮೂಲಕ ಹಾಲಿ ಶಾಸಕರು ತಮ್ಮ ಸ್ಥಾನಗಳಲ್ಲಿ ಬದಲಾವಣೆ ಮಾಡಿಕೊಳ್ಳದೇ ತಮ್ಮ ಸ್ಥಾನದಲ್ಲೇ ಮುಂದುವರೆಯುವಂತೆ ಮಾಡಿದೆ.

ಈ ಕುರಿತಂತೆ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಅಜಯ್ ಮಕೇನ್ ಮಾಹಿತಿ ನೀಡಿದ್ದು, 'ಮುಂಬರುವ ಚುನಾವಣೆಯಲ್ಲಿ ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಿರ್ಧಾರದಿಂದ ಹಾಲಿ ಸಿಎಂಗೆ ಹಿನ್ನಡೆ!
ಇನ್ನು ಕಾಂಗ್ರೆಸ್ ಪಕ್ಷದ ನಿರ್ಧಾರದಿಂದ ಪಂಜಾಬ್ ನ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಏಕೆಂದರೆ ಅವರ ಕಿರಿಯ ಸಹೋದರ ಡಾ ಮನೋಹರ್ ಸಿಂಗ್ ಮೊಹಾಲಿಯ ಖರಾರ್ ಸಿವಿಲ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ಒಂದೆರಡು ದಿನಗಳ ಹಿಂದೆ ರಾಜೀನಾಮೆ ನೀಡಿ ಬಸ್ಸಿ ಪಠಾನಾ ವಿಧಾನಸಭಾ ಸ್ಥಾನ ಪಡೆದುಕೊಂಡಿದ್ದರು. ಈಗಾಗಲೇ ಕಾಂಗ್ರೆಸ್ ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಬಿಪಿಯನ್ನು ಬೆಂಬಲಿಸಲಿದ್ದು, ಅವರಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ನವಜೋತ್ ಸಿಧು ಬೆಂಬಲ ನೀಡಿದ್ದಾರೆ.

ಸಂಪುಟದ ಸಚಿವ ಬ್ರಹ್ಮ ಮೊಹಿಂದ್ರಾ ಮತ್ತು ಟ್ರಿಪ್ಟ್ ರಾಜಿಂದರ್ ಸಿಂಗ್ ಬಜ್ವಾ ಕೂಡ ಮುಂಬರುವ ಚುನಾವಣೆಯಲ್ಲಿ ತಮ್ಮ ಪುತ್ರರನ್ನು ಕಣಕ್ಕಿಳಿಸಲು ಯೋಜಿಸುತ್ತಿದ್ದಾರೆ. ಕ್ಯಾಬಿನೆಟ್ ಸಚಿವ ರಾಣಾ ಗುರ್ಜಿತ್ ಸಿಂಗ್ ಕಾಂಗ್ರೆಸ್ ಶಾಸಕ ನವತೇಜ್ ಸಿಂಗ್ ಚೀಮಾ ಪ್ರತಿನಿಧಿಸುವ ಕ್ಷೇತ್ರವಾದ ಸುಲ್ತಾನ್‍ಪುರ ಲೋಧಿಯಿಂದ ತಮ್ಮ ಮಗನಿಗೆ ಟಿಕೆಟ್ ಬಯಸಿದ್ದರು. ಆದರೆ, ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯಲ್ಲಿ ಚೀಮಾ ಉಮೇದುವಾರಿಕೆಯನ್ನು ಸಿಧು ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ ರಾಜ್ಯಸಭಾ ಸದಸ್ಯ ಪರತಾಪ್ ಸಿಂಗ್ ಬಾಜ್ವಾ ತಮ್ಮ ಕಿರಿಯ ಸಹೋದರ ಫತೇ ಜಂಗ್ ಸಿಂಗ್ ಬಾಜ್ವಾ ಪ್ರತಿನಿಧಿಸುವ ಖಾಡಿಯನ್ ಸ್ಥಾನಕ್ಕೆ ಸಹ ಪಣತೊಟ್ಟಿದ್ದಾರೆ. ಮಂಡಿ ಮಂಡಳಿ ಅಧ್ಯಕ್ಷ ಲಾಲ್ ಸಿಂಗ್ ಕೂಡ ತಮ್ಮ ಟೋಪಿಯನ್ನು ಕಣಕ್ಕೆ ಇಳಿಸುವ ಸೂಚನೆ ನೀಡಿದ್ದಾರೆ. ಅವರ ಪುತ್ರನೂ ಕೂಡ ಶಾಸಕರಾಗಿದ್ದಾರೆ.

ಕ್ರಿಸ್ ಮಸ್ ಗೂ ಮೊದಲು ಅಭ್ಯರ್ಥಿಗಳ ಪಟ್ಟಿ?
ಕಾಂಗ್ರೆಸ್ ಪಕ್ಷವು ಕ್ರಿಸ್‍ಮಸ್‍ಗೆ ಮೊದಲು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲು ಯೋಜಿಸುತ್ತಿದೆ. ಆದರೆ ಇನ್ನೂ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ನಡೆಸಲು ಸಾಧ್ಯವಾಗದ ಕಾರಣ ಇದು ಈಗ ಕ್ರಿಸ್ಮಸ್ ಮೊದಲು ಘೋಷಿಸುವುದು ಅಸಂಭವವಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com