ಪ್ರಯಾಣಿಕರೇ ಚಲಿಸುತ್ತಿರುವ ರೈಲಿನಿಂದ ಇಳಿಯುವ ಅಭ್ಯಾಸವಿದೆಯೇ? ಜೋಕೆ, ಪ್ರಾಣಕ್ಕೆ ಅಪಾಯ... ಈ ವಿಡಿಯೋ ನೋಡಿ!

ರೈಲ್ವೆ ನಿಲ್ದಾಣಕ್ಕೆ ಬಂದು ರೈಲು ನಿಲ್ಲಲು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಇಳಿಯಲು ಪ್ರಯತ್ನಿಸಿದ ಪ್ರಯಾಣಿಕ ಬೀಳುತ್ತಿದ್ದ ವೇಳೆ ರೈಲ್ವೆ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಕಾಪಾಡಿದ ಘಟನೆ ಮುಂಬೈಯ ಬೊರಿವಾಲಿ ರೈಲು ನಿಲ್ದಾಣದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.
ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ಆರ್ ಪಿಎಫ್ ಸಿಬ್ಬಂದಿ
ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ಆರ್ ಪಿಎಫ್ ಸಿಬ್ಬಂದಿ

ಮುಂಬೈ: ರೈಲ್ವೆ ನಿಲ್ದಾಣಕ್ಕೆ ಬಂದು ರೈಲು ನಿಲ್ಲಲು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಇಳಿಯಲು ಪ್ರಯತ್ನಿಸಿದ ಪ್ರಯಾಣಿಕ ಬೀಳುತ್ತಿದ್ದ ವೇಳೆ ರೈಲ್ವೆ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಕಾಪಾಡಿದ ಘಟನೆ ಮುಂಬೈಯ ಬೊರಿವಾಲಿ ರೈಲು ನಿಲ್ದಾಣದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.

ಆರ್ ಪಿಎಫ್ ಸಿಬ್ಬಂದಿ ಪ್ರಯಾಣಿಕನನ್ನು ಓಡಿಬಂದು ಕಾಪಾಡುವ ವೇಳೆ ರೈಲು ಮತ್ತು ಪ್ಲಾಟ್ ಫಾರ್ಮ್ ಮಧ್ಯೆ ಅಪಾಯಕಾರಿ ಸ್ಥಿತಿಯಲ್ಲಿದ್ದರು, ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೋಡುವಾಗ ಮೈ ನಡುಗುತ್ತದೆ.

ಈ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಪ್ರಯಾಣಿಕರು ರೈಲು ಬಂದು ನಿಲ್ದಾಣದಲ್ಲಿ ನಿಂತ ಮೇಲೆಯೇ ಇಳಿಯಬೇಕು. ಚಲಿಸುತ್ತಿರುವಾಗ ಇಳಿದರೆ ಅಪಾಯ ಎಂದ ಸಂದೇಶವನ್ನು ಈ ಘಟನೆ ಸಾರುತ್ತದೆ. ಪ್ರಯಾಣಿಕ ಪ್ಲಾಟ್ ಫಾರ್ಮ್ ಕೆಳಗೆ ಬಿದ್ದಿದ್ದರೆ ಪ್ರಾಣಕ್ಕೇ ಕುತ್ತಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com