ಉತ್ತರಾಖಂಡ್ ಸಿಎಂ ತೀರ್ಥ ಸಿಂಗ್ ರಾವತ್ ದೆಹಲಿಗೆ ಭೇಟಿ; ಮತ್ತೆ ನಾಯಕ್ವ ಬದಲಾವಣೆಯ ಬಗ್ಗೆ ಚರ್ಚೆ?

ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ. 
ತಿರಥ್ ಸಿಂಗ್ ರಾವತ್
ತಿರಥ್ ಸಿಂಗ್ ರಾವತ್
Updated on

ನವದೆಹಲಿ: ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ. 

ನವದೆಹಲಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪೂರ್ವನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ನವದೆಹಲಿಯಲ್ಲಿ ತೀರ್ಥ ಸಿಂಗ್ ರಾವತ್ ಅವರು ಅಮಿತ್ ಶಾ ಹಾಗೂ ಅನಿಲ್ ಬಲುನಿ ಅವರನ್ನು ಭೇಟಿ ಮಾಡಲಿದ್ದಾರೆ. 

" ಉಪಚುನಾವಣೆಗಳ ಬಗ್ಗೆ ಚರ್ಚಿಸಲು ಕೇಂದ್ರ ನಾಯಕರು ಮುಖ್ಯಮಂತ್ರಿಗಳಿಗೆ ಬುಲಾವ್ ಕಳಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕುಂಭ ಮೇಳದಲ್ಲಿ ನಕಲಿ ಟೆಸ್ಟಿಂಗ್ ಹಗರಣ ನಾಯಕತ್ವದ ಬದಲಾವಣೆ ಚರ್ಚೆ ಬಲವಾಗಲು ಇರುವ ಕಾರಣಗಳಲ್ಲಿ ಒಂದು" ಎಂದು ಪಕ್ಷದ ಮೂಲಗಳು ತಿಳಿಸಿವೆ. 

ವಿಧಾನಸಭೆಯ ನಿಯಮಗಳ ಪ್ರಕಾರ ರಾವತ್ ಅವರು ಸೆಪ್ಟೆಂಬರ್ 10 ರ ಒಳಗೆ ಆಯ್ಕೆಯಾಗಬೇಕಾಗುತ್ತದೆ. ಪೌರಿ ಕ್ಷೇತ್ರದ ಸಂಸದರಾಗಿರುವರಾವತ್ ಮಾ.10 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

ಪಕ್ಷದಲ್ಲಿರುವ ಹಲವರಿಗೆ ಇದು, ದೇಜಾ ವು ಪರಿಸ್ಥಿತಿ (ಇದೇ ಪರಿಸ್ಥಿತಿಯನ್ನು ಹಿಂದಿಮ್ಮೆ ಕಂಡಿದ್ದು) ಯಾಗಿದೆ. ಮಾರ್ಚ್ ನಲ್ಲಿ ಅಂದಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಕೇಂದ್ರ ನಾಯಕರು ಕರೆಸಿ ಮಾತನಾಡಿದ್ದರ ಬಳಿಕ ಸಿಎಂ ಬದಲಾವಣೆಯಾಗಿ ಈಗಿರುವ ತೀರ್ಥ ಸಿಂಗ್ ರಾವತ್ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗಿತ್ತು.  

ಅಚ್ಚರಿಯ ಬೆಳವಣಿಗೆಯಲ್ಲಿ ಈಗಲೂ ಕೇಂದ್ರ ನಾಯಕರು ಏಕಾ ಏಕಿ ಸಿಎಂ ತೀರ್ಥ ಸಿಂಗ್ ರಾವತ್ ಅವರನ್ನು ಕರೆಸಿ ಮಾತನಾಡಿದ್ದಾರೆ. ಮಂಗಳವಾರದಂದು ಪಕ್ಷದಲ್ಲಿ ಮೂರು ದಿನಗಳ ಚಿಂತನ್ ಶಿಬಿರ ಮುಕ್ತಾಯಗೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗಳ ಬಗ್ಗೆ ಚರ್ಚಿಸಲಾಗಿದೆ. 

ಹೊಸ ಮುಖ್ಯಮಂತ್ರಿಗಳ ನೇಮಕವಾದಾಗ ಮಾರ್ಚ್ 2022 ರ ಬದಲು 2021 ರ ಆಗಸ್ಟ್ ನಲ್ಲಿಯೇ ಉತ್ತರಾಖಂಡ್ ರಾಜ್ಯ ಚುನಾವಣೆಯೂ ನಡೆಯಲಿದೆ ಎಂಬ ಊಹಾಪೋಹಗಳೂ ಉಂಟಾಗಿತ್ತು. ಆದರೆ ಆ ಬಳಿಕ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಇಲ್ಲ ಎಂದು ಪಕ್ಷದ ನಾಯಕರು ಸ್ಪಷ್ಟನೆ ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com