ದೀದಿಗೆ ಭಾರಿ ಹಿನ್ನಡೆ; ಸುವೇಂದು ಅಧಿಕಾರಿಗೆ ಭದ್ರತೆ ನೀಡಿ: ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರಿಂದ ಹಿಂಪಡೆಯಲಾಗಿದ್ದ ಭದ್ರತೆಯನ್ನು ಮತ್ತೆ ವಾಪಸ್ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋಲ್ಕತಾ ಹೈಕೋರ್ಟ್ ಸೂಚನೆ ನೀಡಿದೆ.
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ

ಕೋಲ್ಕತಾ: ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರಿಂದ ಹಿಂಪಡೆಯಲಾಗಿದ್ದ ಭದ್ರತೆಯನ್ನು ಮತ್ತೆ ವಾಪಸ್ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋಲ್ಕತಾ ಹೈಕೋರ್ಟ್ ಸೂಚನೆ ನೀಡಿದೆ.

ಸುವೇಂದು ಅಧಿಕಾರಿ ಅವರ ಭದ್ರತೆ ಹಿಂಪಡೆದ ಬೆನ್ನಲ್ಲೇ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋಲ್ಕತಾ ಹೈಕೋರ್ಟ್, ಈ ಹಿಂದೆ ಕೇಂದ್ರ ಗೃಹ ಸಚಿವಾಲಯ ಸುವೇಂದು ಅಧಿಕಾರಿಗೆ ನೀಡಿರುವ ಝೆಡ್ ವರ್ಗದ ಭದ್ರತೆ ಸೂಕ್ತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಇನ್ನು ವಿಚಾರಣೆ ವೇಳೆ ತನ್ನ ವಾದ ಮಂಡಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು, ಸುವೇಂದು ಅಧಿಕಾರಿ ಅವರಿಗೆ ಹಳದಿ ಪುಸ್ತಕದ ನಿಯಮಗಳ ಅನ್ವಯ ಭದ್ರತೆ ನಿರ್ವಹಣೆ ಮಾಡಲಾಗಿತ್ತು ಎಂದು ಹೇಳಿದೆ. ಅಂತೆಯೇ ಡೈರೆಕ್ಟರೇಟ್ ಸೆಕ್ಯುರಿಟಿಯ ವರದಿಯಲ್ಲಿ, ರೂಟ್ ಲೈನಿಂಗ್ ಮತ್ತು ಸಭೆಗಳಿಗೆ  ಸುವೇಂದು ಅಧಿಕಾರಿಗೆ ಈಗಾಗಲೇ ರಾಜ್ಯದ ಭದ್ರತೆಯನ್ನು ಒದಗಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಆದರೆ ಬಂಗಾಳ ಚುನಾವಣೆ ಬೆನ್ನಲ್ಲೇ ಸುವೇಂದು ಅಧಿಕಾರಿಯ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು. ಇದೇ ವಿಚಾರವಾಗಿ ಬಿಜೆಪಿ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com