ಕೋವಿಡ್-19 ವಿರುದ್ಧ ಹೋರಾಟ ಮಾಡುತ್ತಿರುವ ಭಾರತೀಯ ವೈದ್ಯರಿಗೆ 'ಭಾರತ ರತ್ನ' ನೀಡಿ: ಕೇಜ್ರಿವಾಲ್ ಆಗ್ರಹ
ಲಖನೌ: ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುತ್ತಿರುವ ಮುಂಚೂಣಿ ಹೋರಾಟಗಾರರಾದ ಭಾರತೀಯ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ ಭಾರತ ರತ್ನ ನೀಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ವೈದ್ಯರಿಗೆ ಭಾರತ್ ರತ್ನ ಒಂದು ನಿಜವಾದ ಗೌರವಾಗಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಭಾರತೀಯ ವೈದ್ಯರಿಗೆ ಭಾರತ ರತ್ನ ನೀಡಿ ಗೌರವಿಸಬೇಕಿದೆ. ಭಾರತೀಯ ವೈದ್ಯರು ಎಂದರೆ, ಎಲ್ಲಾ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿಗಳೆಲ್ಲರೂ ಸೇರುತ್ತಾರೆ. ಹುತಾತ್ಮರಾದ ವೈದ್ಯರಿಗೆ ಇದು ನಿಜವಾದ ಗೌರವವಾಗಿರುತ್ತದೆ. ತಮ್ಮ ಜೀವ ಮತ್ತು ಕುಟುಂಬದ ಬಗ್ಗೆ ಚಿಂತಿಸದೆ ಸೇವೆ ಸಲ್ಲಿಸುವವರಿಗೆ ಇದು ಗೌರವವಾಗಿರುತ್ತದೆ. ಸರ್ಕಾರ ಈ ಕಾರ್ಯಕ್ಕೆ ಇಡೀ ದೇಶ ಸಂತಸ ಪಡುತ್ತದೆ ಎಂದು ತಿಳಿಸಿದ್ದಾರೆ.
ಕೊರೋನಾ 2ನೇ ಅಲೆಯಲ್ಲಿ ದೇಶದಾದ್ಯಂತ ಜೂನ್ 30ರವರೆಗೆ 798 ವೈದ್ಯರು ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆಂದು ಭಾರತೀಯ ವೈದ್ಯಕೀಯ ಸಂಸ್ಥೆ ಮಾಹಿತಿ ನೀಡಿದೆ. ದೆಹಲಿಯಲ್ಲಿ 128 ವೈದ್ಯರು ಹಾಗೂ ಬಿಹಾರ ರಾಜ್ಯದಲ್ಲಿ 115 ವೈದ್ಯರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ