ಕೋವಿಡ್‍ ನಂತರದ ಪರಿಣಾಮಗಳ ಬಗ್ಗೆ ಒತ್ತು ನೀಡಲು ಭಾರತೀಯ ಕಾರ್ಯತಂತ್ರ ಸಮುದಾಯಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ

ಕೋವಿಡ್ ಸಾಂಕ್ರಾಮಿಕವನ್ನು ಮಾನವಕುಲದ ಅತಿದೊಡ್ಡ ಸವಾಲು ಎಂದು ಬಣ್ಣಿಸಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ಕೋವಿಡ್ ನಂತರ ಕೋವಿಡ್ ಸಾಂಕ್ರಾಮಿಕವು ಭಾರತದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಭಾರತೀಯ ಕಾರ್ಯತಂತ್ರ ಮತ್ತು ಶೈಕ್ಷಣಿಕ ಸಮುದಾಯ ಒತ್ತು  ನೀಡಬೇಕು ಎಂದು ಕರೆ ನೀಡಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

ಹೈದರಾಬಾದ್: ಕೋವಿಡ್ ಸಾಂಕ್ರಾಮಿಕವನ್ನು ಮಾನವಕುಲದ ಅತಿದೊಡ್ಡ ಸವಾಲು ಎಂದು ಬಣ್ಣಿಸಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ಕೋವಿಡ್ ನಂತರ ಕೋವಿಡ್ ಸಾಂಕ್ರಾಮಿಕವು ಭಾರತದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಭಾರತೀಯ ಕಾರ್ಯತಂತ್ರ ಮತ್ತು ಶೈಕ್ಷಣಿಕ ಸಮುದಾಯ ಒತ್ತು  ನೀಡಬೇಕು ಎಂದು ಕರೆ ನೀಡಿದ್ದಾರೆ.

ವಿಶ್ವ ವ್ಯವಹಾರಗಳ ಭಾರತೀಯ ಪರಿಷತ್ತು (ಐಸಿಡಬ್ಲ್ಯು ಎ) ನ ಗೌರವಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿಯವರು, ಸಂಸ್ಥೆಯ ಆಡಳಿತ ಮಂಡಳಿಯ 19ನೇ ಸಭೆಯನ್ನು ಶನಿವಾರ ವರ್ಚ್ಯುವಲ್‍ ಮೂಲಕ ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಐಸಿಡಬ್ಲ್ಯು ಎ ನ ಆಡಳಿತ ಮಂಡಳಿಯ 20ನೇ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಐಸಿಡಬ್ಲ್ಯುಎ ನ ಎಲ್ಲ ಸಮಾಲೋಚನೆಗಳಲ್ಲಿ ಮತ್ತು ಎಲ್ಲ ಕ್ಷೇತ್ರಗಳ ಸಂಶೋಧನೆಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಜಾಗತಿಕ ಪರಿಣಾಮದ ಬಗ್ಗೆ ಪ್ರಮುಖವಾಗಿ ಬೆಳಕು ಚೆಲ್ಲಿರುವುದು ತೃಪ್ತಿದಾಯಕವಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಸಂಸ್ಥೆ ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ  ಎಂದರು.

ಕಳೆದ ಏಳು ತಿಂಗಳಲ್ಲಿ ಸಂಸ್ಥೆ ಸಂಶೋಧನಾ ಚಟುವಟಿಕೆಗಳು, ಉಪನ್ಯಾಸಗಳು, ಚರ್ಚೆಗಳು ಸೇರಿದಂತೆ 28 ವಿಚಾರ ಸಂಚಿಕರಣ ಮತ್ತು ಗೋಷ್ಠಿಗಳನ್ನು ಆಯೋಜಿಸಿದೆ. ಸಾಂಪ್ರದಾಯಿಕವಾಗಿ ಒತ್ತು ನೀಡಲಾಗುತ್ತಿದ್ದ ಸಂಶೋಧನೆಗಳ ಹೊರತಾಗಿ ಐಸಿಡಬ್ಲ್ಯು ಎ, ಗಾಂಧೀಜಿ ಮತ್ತು ವಿಶ್ವ, ಸಾಗರ ವ್ಯವಹಾರಗಳು, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಲಿಂಗ ಸಮಾನತೆಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com