ಮಾಸ್ಕ್ ಧರಿಸದೆ ಮದುವೆ ಫೋಟೋಶೂಟ್ ನಡೆಸಿದ್ದ ವಧುವಿನ ವಿರುದ್ಧ ಪ್ರಕರಣ ದಾಖಲು, ವಿಡಿಯೋ ವೈರಲ್!

ಪುಣೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮಾಸ್ಕ್ ಧರಿಸದೆ ಕಾರಿನ ಬಾನೆಟ್‌ನಲ್ಲಿ ಕುಳಿತು ಮದುವೆ ಫೋಟೋಶೂಟ್‌ ನಡೆಸಿದ್ದ ವಧುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಡಿಯೋ ದೃಶ್ಯ
ವಿಡಿಯೋ ದೃಶ್ಯ

ಪುಣೆ: ಪುಣೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮಾಸ್ಕ್ ಧರಿಸದೆ ಕಾರಿನ ಬಾನೆಟ್‌ನಲ್ಲಿ ಕುಳಿತು ಮದುವೆ ಫೋಟೋಶೂಟ್‌ ನಡೆಸಿದ್ದ ವಧುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಇದೇ ವೇಳೆ, ಫೋಟೋಶೂಟ್‌ನಲ್ಲಿ ಭಾಗವಹಿಸಿದ ಕಾರಿನ ಚಾಲಕ, ಕ್ಯಾಮರಾಮನ್ ಮತ್ತು ಇತರರ ವಿರುದ್ಧವೂ ಪ್ರಕರಣಗಳು ದಾಖಲಾಗಿದ್ದು ಚಿತ್ರೀಕರಣಕ್ಕೆ ಬಳಸಿದ ಕ್ಯಾಮೆರಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪುಣೆ ನಗರದ ಡೈವ್ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಫೋಟೋಶೂಟ್‌ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಐಪಿಸಿಯ ಸೆಕ್ಷನ್ 269, 188, 279, 107, 336, 34ರ ಅಡಿಯಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆ, ಮಹಾರಾಷ್ಟ್ರ ಕೋವಿಡ್ ನಿರ್ವಹಣಾ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಈ ವರ್ಷದ ಆರಂಭದಲ್ಲಿ ಇದು ದೇಶದ ಅತ್ಯಂತ ಕೆಟ್ಟ ಕೊರೋನಾ ಪೀಡಿತ ರಾಜ್ಯಗಳಲ್ಲಿ ಒಂದಾಗಿತ್ತು. ಎರಡನೇ ಅಲೆ ಏಪ್ರಿಲ್‌ನಲ್ಲಿ ಒಂದೇ ದಿನದಲ್ಲಿ 67,000 ಪ್ರಕರಣಗಳೊಂದಿಗೆ ಉತ್ತುಂಗಕ್ಕೇರಿತು.

ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಮಹಾರಾಷ್ಟ್ರದಲ್ಲಿ ಮಂಗಳವಾರ 7,243 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು 196 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com