ಮೇ 15 ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ವಾಟ್ಸಾಪ್ ಖಾತೆಗಳು ಬ್ಯಾನ್: ವರದಿ

ಮೇ 15 ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದ್ದರೆ, 345 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮೇ 15 ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದ್ದರೆ, 345 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ.

ದೈತ್ಯ ಡಿಜಿಟಲ್ ಫ್ಲಾಟ್ ಫಾರಂಗಳಿಗೆ ನೂತನ ಐಟಿ ನಿಯಮಗಳು ಅಗತ್ಯವಾಗಿದೆ. ಐದು ಮಿಲಿಯನ್ ಬಳಕೆದಾರರೊಂದಿಗೆ ಪ್ರತಿ ತಿಂಗಳು ಕುಂದುಕೊರತೆ ವರದಿಯನ್ನು ಪ್ರಕಟಿಸಬೇಕಾಗಿದೆ. ಸ್ವೀಕರಿಸಲಾದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮವನ್ನು ಉಲ್ಲೇಖಿಸಬೇಕಾಗಿದೆ.

ಹಾನಿಕಾರಕ ಅಥವಾ ದೊಡ್ಡ ಪ್ರಮಾಣದ ಅನಗತ್ಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ತಡೆಗಟ್ಟುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ, ಹೆಚ್ಚಿನ ಅಥವಾ ಅಸಹಜ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ಸುಧಾರಿತ ಸಾಮರ್ಥ್ಯಗಳನ್ನು ನಿರ್ವಹಣೆ ಮಾಡುತ್ತೇವೆ, ಈ ರೀತಿಯ ನಿಂದನೆಗೆ ಪ್ರಯತ್ನಿಸಿದ ಎರಡು ಭಾರತೀಯರ ಖಾತೆಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಬ್ಯಾನ್ ಮಾಡಿರುವುದಾಗಿ ವಾಟ್ಸಾಪ್ ಗುರುವಾರ ತಿಳಿಸಿದೆ. 

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಥವಾ ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಮೇಸೆಜ್ ಗಳಿಂದಾಗಿ ಬಹುತೇಕವಾಗಿ ಈ ರೀತಿಯ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ವ್ಯವಸ್ಥೆಗಳ ಅತ್ಯಾಧುನಿಕತೆ ಹೆಚ್ಚಾದಂತೆ 2019ರಿಂದ ಬ್ಯಾನ್ ಆಗುವ ಖಾತೆಗಳ ಸಂಖ್ಯೆಯಲ್ಲಿ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿದೆ. ಸ್ವಯಂ ಚಾಲಿತವಾಗಿ ಅಥವಾ ಒಂದೇ ಬಾರಿಗೆ ಹೆಚ್ಚಿನ ರೀತಿಯಲ್ಲಿ ಸಂದೇಶ ಕಳುಹಿಸಲು ಪ್ರಯತ್ನಿಸುವ ಖಾತೆಗಳನ್ನು ಗುರುತಿಸಲಾಗಿದೆ. ಜಾಗತಿಕವಾಗಿ ತಿಂಗಳಿಗೆ ಸರಾಸರಿ ಎಂಟು ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ  ಅಥವಾ ನಿಷ್ಕ್ರಿಯಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಬ್ಯಾನ್ ಗೆ ಮೊರೆ, ಖಾತೆಗೆ ಸಹಕಾರ, ಉತ್ಪನ್ನಕ್ಕೆ ಬೆಂಬಲ ಸೇರಿದಂತೆ ಒಟ್ಟಾರೇ 345 ಕುಂದುಕೂರತೆಗಳನ್ನು ಆಲಿಸಲಾಗಿದೆ. ಇದರ ವಿರುದ್ಧ  ಮೇ 15 ರಿಂದ ಜೂನ್ 15, 2021 ರವರೆಗೆ 63 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕುಂದುಕೊರತೆ ಚಾನೆಲ್ (ಮಾರ್ಗ)ದ ಮೂಲಕ ಬಳಕೆದಾರರ ದೂರುಗಳನ್ನು ಸ್ವೀಕರಿಸಲಾಗುವುದು ಎಂದು ವಾಟ್ಸಾಪ್ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com