ದೇಶ
ಉತ್ತರ ಪ್ರದೇಶ: ಸಂಭಾಲ್ ನಲ್ಲಿ ಭೀಕರ ಬಸ್ ಅಪಘಾತ, 7 ಮಂದಿ ಸಾವು
ಎರಡು ಬಸ್ ಗಳ ನಡುವೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 8ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ನ ಆಗ್ರಾ -ಚೌಂದಾಸಿ ಹೈವೇಯಲ್ಲಿ ಸಂಭವಿಸಿದೆ.
ಸಂಭಾಲ್: ಎರಡು ಬಸ್ ಗಳ ನಡುವೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 8ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ನ ಆಗ್ರಾ -ಚೌಂದಾಸಿ ಹೈವೇಯಲ್ಲಿ ಸಂಭವಿಸಿದೆ.
ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ, ಮದುವೆ ಸಮಾರಂಭದಿಂದ ಜನರನ್ನು ಕರೆದೊಯ್ಯುತ್ತಿದ್ದ ಬಸ್ ಚಕ್ರ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿತ್ತು. ಈ ವೇಳೆ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ ಎಂದು ಎಸ್ ಪಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.
ವೃಪಾಲ್, ಹ್ಯಾಪಿ, ಛೋಟೆ, ರಾಕೇಶ್, ಅಭಯ್ ಮತ್ತು ವಿನೀತ್ ಹಾಗ ಭೂರೇ ಮೃತ ದುರ್ದೈವಿಗಳು, ಇವರೆಲ್ಲಾ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಗಾಯಗೊಂಡ 8 ಮಂದಿಯನ್ನು ಸಮೀಪದ ಆಸ್ಪತ್ಪೆಗೆ ದಾಖಲಿಸಿದ್ದು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.