ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ಆರು ಅಸ್ಸಾಂ ಪೊಲೀಸರು ಸಾವು, ಎಸ್ ಪಿ ಸೇರಿದಂತೆ 50 ಮಂದಿಗೆ ಗಾಯ

ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಸೋಮವಾರ ಭುಗಿಲೆದಿದ್ದ ಹಿಂಸಾಚಾರದಲ್ಲಿ ಆರು ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರೆ, ನಾಗರಿಕರು ಸೇರಿದಂತೆ ಸುಮಾರು ಎರಡು ಡಜನ್ ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 
ಗಡಿಯಲ್ಲಿ ದೊಣ್ಣೆಗಳೊಂದಿಗೆ ಮಿಜೋರಾಂ ನಾಗರಿಕರು ಪೊಲೀಸರೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಚಿತ್ರ
ಗಡಿಯಲ್ಲಿ ದೊಣ್ಣೆಗಳೊಂದಿಗೆ ಮಿಜೋರಾಂ ನಾಗರಿಕರು ಪೊಲೀಸರೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಚಿತ್ರ

ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಸೋಮವಾರ ಭುಗಿಲೆದಿದ್ದ ಹಿಂಸಾಚಾರದಲ್ಲಿ ಆರು ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರೆ, ನಾಗರಿಕರು ಸೇರಿದಂತೆ ಸುಮಾರು ಎರಡು ಡಜನ್ ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಉಭಯ ರಾಜ್ಯಗಳ ಪೊಲೀಸರು ಪರಸ್ಪರ ಗುಂಡು ಹಾರಿಸಿದ್ದಾರೆ. ಗಾಯಗೊಂಡವರಲ್ಲಿ ಅಸ್ಸಾಂನ ಕ್ಯಾಚರ್ ಪೊಲೀಸ್ ಅಧೀಕ್ಷಕ ನಿಂಬಲ್ಕರ್ ವೈಭವ್ ಚಂದ್ರಕಾಂತ್ ಮತ್ತು ಜಿಲ್ಲೆಯ ಧೋಲೈ ಪೊಲೀಸ್ ಠಾಣೆಯ ಉಸ್ತುವಾರಿ ಸೇರಿದ್ದಾರೆ.

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಮ್ಮ ರಾಜ್ಯದ ಸಾಂವಿಧಾನಿಕ ಗಡಿಯನ್ನು ರಕ್ಷಿಸುವಾಗ ಅಸ್ಸಾಂನ ಆರು ಧೈರ್ಯಶಾಲಿ ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ನೋವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಮಸ್ಯೆ ಬಗ್ಗೆ ಚರ್ಚಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಸೋಮವಾರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಅಮಿತ್ ಶಾ, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಅಮಿತ್ ಶಾ ಅವರ ಮಧ್ಯ ಪ್ರವೇಶದಿಂದಾಗಿ ಅಸ್ಸಾಂ ಪೊಲೀಸರನ್ನು ಹಿಂತೆಗೆದುಕೊಳ್ಳಲಾಗಿದೆ. ಸಿಆರ್ ಪಿಎಫ್ ಇದೀಗ ಆ ಪ್ರದೇಶದಲ್ಲಿದ್ದಾರೆ.

ಅಸ್ಸಾಂ ಗಡಿಯೊಳಗೆ ಮಿಜೋರಾಂನಿಂದ ರಸ್ತೆ ನಿರ್ಮಾಣವನ್ನು ಅಸ್ಸಾಂ ಪೊಲೀಸರು ತಡೆದಾಗ ಸಮಸ್ಯೆ ತಲೆದೋರಿದೆ ಎಂದು ಅಸ್ಸಾಂ ಸರ್ಕಾರದ ಮೂಲಗಳು ಹೇಳಿವೆ. ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ಟ್ವಿಟರ್ ನಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ನಿರತರಾದಾಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com