ಅಸ್ಸಾಂ-ಮಿಜೋರಾಂ ಗಡಿ ಹಿಂಸಾಚಾರ: ಕೇಂದ್ರ ಗೃಹ ಸಚಿವಾಲಯದ 'ವೈಫಲ್ಯ' ಎಂದ ವೀರಪ್ಪ ಮೊಯಿಲಿ

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ಮುಖಂಡ ಎಂ ವೀರಪ್ಪ ಮೊಯಿಲಿ ಅವರು, ಇದು ಕೇಂದ್ರ ಗೃಹ ಸಚಿವಾಲಯದ....
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ

ನವದೆಹಲಿ: ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ಮುಖಂಡ ಎಂ ವೀರಪ್ಪ ಮೊಯಿಲಿ ಅವರು, ಇದು ಕೇಂದ್ರ ಗೃಹ ಸಚಿವಾಲಯದ "ವೈಫಲ್ಯ" ವನ್ನು ತೋರಿಸುತ್ತದೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಉಭಯ ರಾಜ್ಯಗಳ ಗಡಿಯಲ್ಲಿ ತಕ್ಷಣ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಬೇಕಾಗಿತ್ತು ಎಂದು ಮೊಯಿಲಿ ಹೇಳಿದ್ದಾರೆ.

ಗಡಿ ವಿವಾದಗಳನ್ನು ಪರಿಹರಿಸಲು ರಾಜ್ಯಗಳು ತಮ್ಮದೇ ಆದ ಪೊಲೀಸ್ ಪಡೆಗಳನ್ನು ನಿಯೋಜಿಸಲು ಮುಂದಾದರೆ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹೇಳಿದ್ದಾರೆ.

ಅಸ್ಸಾಂ ಮತ್ತು ಮಿಜೋರಾಂನ ಪೊಲೀಸ್ ಪಡೆಗಳ ನಡುವೆ ಅಂತರರಾಜ್ಯ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಎಸ್ಪಿ ಸೇರಿದಂತೆ 50ಕ್ಕೂ ಮಂದಿ ಗಾಯಗೊಂಡಿದ್ದಾರೆ.

ಅಸ್ಸಾಂ ಮತ್ತು ಮಿಜೋರಾಂನ ಪೊಲೀಸ್ ಪಡೆಗಳ ನಡುವಿನ ಘರ್ಷಣೆಗೆ ಸಾಕ್ಷಿಯಾಗಿರುವುದು ಆಘಾತಕಾರಿ ಘಟನೆ ಎಂದು ಮೊಯಿಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com