2022 ಫೆಬ್ರವರಿಯಿಂದ 22.8 ಕೋಟಿ ಕೋವಾಕ್ಸಿನ್ ಡೋಸ್ ಗಳ ಉತ್ಪಾದನೆ ಆರಂಭ: ಹಾಫ್ಕಿನ್ ಬಯೋಫಾರ್ಮ 

ಮುಂದಿನ ವರ್ಷ ಫೆಬ್ರವರಿಯಿಂದ ಮುಂಬೈ ಮೂಲದ ಹಾಫ್ಕಿನ್ ಬಯೋಫಾರ್ಮ ಕೋವಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಕೇಂದ್ರ ಸರ್ಕಾರದ ಆಶಯದಂತೆ ಈ ವರ್ಷ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಮಧ್ಯೆ ಸಂಸ್ಥೆಗೆ ಸುಮಾರು 55 ಕೋಟಿ ಕೋವಾಕ್ಸಿನ್ ಡೋಸ್ ನ್ನು ವಿತರಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಕೊವಾಕ್ಸಿನ್ ನ ಖಾಲಿ ಬಾಟಲ್ ತೋರಿಸುತ್ತಿರುವ ಆರೋಗ್ಯ ಸೇವೆ ಕಾರ್ಯಕರ್ತೆ
ಕೊವಾಕ್ಸಿನ್ ನ ಖಾಲಿ ಬಾಟಲ್ ತೋರಿಸುತ್ತಿರುವ ಆರೋಗ್ಯ ಸೇವೆ ಕಾರ್ಯಕರ್ತೆ

ಮುಂಬೈ: ಮುಂದಿನ ವರ್ಷ ಫೆಬ್ರವರಿಯಿಂದ ಮುಂಬೈ ಮೂಲದ ಹಾಫ್ಕಿನ್ ಬಯೋಫಾರ್ಮ ಕೋವಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಕೇಂದ್ರ ಸರ್ಕಾರದ ಆಶಯದಂತೆ ಈ ವರ್ಷ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಮಧ್ಯೆ ಸಂಸ್ಥೆಗೆ ಸುಮಾರು 55 ಕೋಟಿ ಕೋವಾಕ್ಸಿನ್ ಡೋಸ್ ನ್ನು ವಿತರಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಹಾಫ್ಕಿನ್ ಬಯೋಫಾರ್ಮಾ ಕಂಪೆನಿಯ ಘಟಕದಲ್ಲಿ ಈಗ ಅತ್ಯಾಧುನಿಕ ಪ್ರಯೋಗಾಲಯ ಮೂಲಕ ಉತ್ಪಾದನೆಯನ್ನು ಆರಂಭಕ್ಕೆ ಕೆಲಸ ಆರಂಭವಾಗಿದ್ದು ಮುಂದಿನ ವರ್ಷದ ಆರಂಭದಲ್ಲಿ 22.8 ಕೋಟಿ ಕೋವಾಕ್ಸಿನ್ ಲಸಿಕೆ ಡೋಸ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದುವರೆಗೆ ಭಾರತದಲ್ಲಿ ಕೋವಾಕ್ಸಿನ್ ನ್ನು ದೇಶೀಯವಾಗಿ ಹೈದರಾಬಾದ್ ನ ಭಾರತ್ ಬಯೋಟೆಕ್ ರಾಷ್ಟ್ರೀಯ ವೈರಾಲಜಿ ಸಂಸ್ಥೆ-ಐಸಿಎಂಆರ್ ಜೊತೆಗೆ ಸೇರಿ ಅಭಿವೃದ್ಧಿಪಡಿಸಿ ಉತ್ಪಾದಿಸುತ್ತಿದೆ. ಇವೆರಡೂ ಸಂಸ್ಥೆಗಳ ಜೊತೆ ಹಾಫ್ಕಿನ್ ಬಯೋಫಾರ್ಮ ಕೈಜೋಡಿಸಿದೆ.

ಹ್ಯಾಫ್‌ಕೈನ್ ಹೊರತುಪಡಿಸಿ ಕೋವಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ್ ಬಯೋಟೆಕ್ ಮೂರು ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ - ಎರಡು ಕೇಂದ್ರೀಯ ಸಂಸ್ಥೆಗಳಾದ ಬಿಬಿಸಿಒಎಲ್ ಮತ್ತು ಇಂಡಿಯನ್ ಇಮ್ಯುನೊಲಾಜಿಕಲ್ಸ್ ಸಂಸ್ಥೆಗಳು.

ಕೇಂದ್ರದಿಂದ 64 ಕೋಟಿ ಮತ್ತು ಮಹಾರಾಷ್ಟ್ರದಿಂದ 94 ಕೋಟಿ ಅನುದಾನವನ್ನು ಪಡೆದಿರುವ ಭಾರತ್ ಬಯೋಟೆಕ್ ಮತ್ತು ಹಾಫ್ಕಿನ್ ನಡುವಿನ ಔಪಚಾರಿಕ ಒಪ್ಪಂದ ಇನ್ನೂ ಸಹಿ ಹಾಕುವ ಪ್ರಕ್ರಿಯೆಯಲ್ಲಿದೆ ಎಂದು ಸರ್ಕಾರದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com