ಮಲಯಾಳಂ ಭಾಷೆ ಮಾತನಾಡದಂತೆ ಆದೇಶ: ಸುತ್ತೋಲೆ ಹಿಂಪಡೆದ ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆ 

ಆಸ್ಪತ್ರೆಯ ನರ್ಸ್ ಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮಾತನಾಡಬೇಕು, ಮಲಯಾಳಂನಲ್ಲಿ ಸಂವಹನ ನಡೆಸಲೇ ಬಾರದು ಎಂದು ಆದೇಶ ಹೊರಡಿಸಿ ವಿವಾದವೆದ್ದ ಹಿನ್ನೆಲೆಯಲ್ಲಿ ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆ ಸುತ್ತೋಲೆಯನ್ನು ಹಿಂಪಡೆದಿದೆ.
ದೆಹಲಿಯ ಜಿ ಬಿ ಪಂತ್ ವೈದ್ಯಕೀಯ ಸಂಸ್ಥೆ
ದೆಹಲಿಯ ಜಿ ಬಿ ಪಂತ್ ವೈದ್ಯಕೀಯ ಸಂಸ್ಥೆ

ನವದೆಹಲಿ: ಆಸ್ಪತ್ರೆಯ ನರ್ಸ್ ಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮಾತನಾಡಬೇಕು, ಮಲಯಾಳಂನಲ್ಲಿ ಸಂವಹನ ನಡೆಸಲೇ ಬಾರದು ಎಂದು ಆದೇಶ ಹೊರಡಿಸಿ ವಿವಾದವೆದ್ದ ಹಿನ್ನೆಲೆಯಲ್ಲಿ ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆ ಸುತ್ತೋಲೆಯನ್ನು ಹಿಂಪಡೆದಿದೆ.

ಸುತ್ತೋಲೆಯನ್ನು ತಮ್ಮ ಗಮನಕ್ಕೆ ತಾರದೆ ಹೊರಡಿಸಲಾಗಿತ್ತು ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ಹೇಳುತ್ತಾರೆ.

ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ಆದೇಶ ಹೊರಡಿಸಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಸಂವಹನ ನಡೆಸಬೇಕು, ಮಲಯಾಳಂ ಭಾಷೆಯಲ್ಲಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಸುತ್ತೋಲೆ ತೀವ್ರ ವಿವಾದ ಸೃಷ್ಟಿಸಿತ್ತು. ಈ ಬೆಳವಣಿಗೆ ಬಳಿಕ ದೆಹಲಿ ಆರೋಗ್ಯ ಇಲಾಖೆ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆಗೆ ಮೆಮೊ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com