ಸ್ವಚ್ಛ ಭಾರತ್ ಮಿಷನ್ ಅಡಿ ತ್ಯಾಜ್ಯ ನಿರ್ವಹಣೆಗಾಗಿ 2 ಲಕ್ಷ ಗ್ರಾಮಗಳಿಗೆ 40,700 ಕೋಟಿ ರೂ. ಅನುದಾನ

ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದಕ್ಕಾಗಿ 2 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 40,700 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 
ತ್ಯಾಜ್ಯ ನಿರ್ವಹಣೆ (ಸಂಗ್ರಹ ಚಿತ್ರ)
ತ್ಯಾಜ್ಯ ನಿರ್ವಹಣೆ (ಸಂಗ್ರಹ ಚಿತ್ರ)

ನವದೆಹಲಿ: ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದಕ್ಕಾಗಿ 2 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 40,700 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 

ಜಲ್ ಶಕ್ತಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ 14,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ರಾಜ್ಯಗಳು 8,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಉಳಿದ ಹಣ ಬೇರೆ ಮೂಲಗಳಿಂದ ಬರಲಿದೆ ಎಂದು ಹೇಳಿದೆ.

ಎಸ್ ಡಬ್ಲ್ಯುಬಿ (ಜಿ) ಪ್ರಗತಿಯನ್ನು ಸೋಮವಾರದಂದು ಇಲಾಖೆಯ ರಾಜ್ಯ ಸಚಿವ ಲಾಲ್ ಕಠಾರಿಯಾ ಪರಿಶೀಲನೆ ನಡೆಸಿದರು. 

ಸ್ವಚ್ಛಭಾರತ್ ಮಿಷನ್ ಗ್ರಾಮೀಣ್ (ಎಸ್ ಬಿಎಂ-ಜಿ) ಎರಡನೇ ಹಂತದಲ್ಲಿ ಜಲ ಶಕ್ತಿ ಸಚಿವಾಲಯ 2 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ತ್ಯಾಜ್ಯ ನಿರ್ವಹಣೆಗೆ ನೆರವು ನೀಡಲಿದ್ದು 2021-22 ನೇ ಸಾಲಿನಲ್ಲಿ 40,700 ಕೋಟಿ ಅನುದಾನ ಒದಗಿಸಲಿದೆ ಎಂದು ಸಚಿವಾಲಯ ಹೇಳಿದೆ. 

"ಕೇಂದ್ರ ಸರ್ಕಾರ 14,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ರಾಜ್ಯಗಳು 8,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ, 12,730 ಕೋಟಿ ರೂಪಾಯಿ 15 ನೇ ಹಣಕಾಸು ಆಯೋಗದಿಂದ ಹಾಗೂ 4,100 ಕೋಟಿ ರೂಪಾಯಿ ಎಂಜಿಎನ್ ಆರ್ ಇಜಿಎಸ್ ನ ಮೂಲಕ ಸಂಗ್ರಹಿಸಲಾಗುತ್ತದೆ. ಉಳಿದ 1,500 ಕೋಟಿ ರೂಪಾಯಿಗಳನ್ನು ರಾಜ್ಯಗಳಿಂದಲೇ ಉದ್ಯಮದ ಮಾಡಲ್, ಸಿಎಸ್ ಆರ್ ಹಾಗೂ ಇನ್ನಿತರ ಯೋಜನೆಗಳಿಂದ ಸಂಗ್ರಹಿಸಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com