ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ: ನಾಲ್ಕು ಬಾರಿಯ ಶಾಸಕ ರುಪ್‌ಜ್ಯೋತಿ ಕುರ್ಮಿ ಬಿಜೆಪಿಗೆ ಸೇರ್ಪಡೆ
ಗುವಾಹಟಿ: ಅಸ್ಸಾಂ ನಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದಿದ್ದ ಮಾಜಿ ಶಾಸಕ ರುಪ್ ಜ್ಯೋತಿ ಕುರ್ಮಿ ಸೋಮವಾರ ಬಿಜೆಪಿಗೆ ಸೇರ್ಪಡೆಯಾದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತಿತರರು ಕುರ್ಮಿ ಪಕ್ಷಕ್ಕೆ ಬರಮಾಡಿಕೊಂಡರು. 49 ವರ್ಷದ ಕುರ್ಮಿ 2019ರಲ್ಲಿಯೇ ಬಿಜೆಪಿ ಸೇರಲು ಸಿದ್ಧರಾಗಿದ್ದರು, ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಶರ್ಮಾ ಹೇಳಿದರು.
ರುಪ್ ಜ್ಯೋತಿ ಕುರ್ಮಿ ಅವರನ್ನು ಬಿಜೆಪಿ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಟಿ-ಬುಡಕಟ್ಟು ಸಮುದಾಯದ ಪ್ರಾಮಾಣಿಕ ನಾಯಕ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದ ಕುರ್ಮಿ, ಬಡವರು ಹಾಗೂ ಈಶಾನ್ಯ ವಲಯದ ಅಭಿವೃದ್ಧಿಗಾಗಿ ಯಾವಾಗಲು ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಅನುಭವಗಳಿಂದ ಅಸ್ಸಾಂನಲ್ಲಿ ಬಿಜೆಪಿಗೆ ತುಂಬಾ ಅನುಕೂಲಕರವಾಗಲಿದೆ. ಅವರಿಗೆ ಒಳ್ಳೇಯದಾಗಲಿ ಎಂದು ಅಸ್ಸಾಂ ಮುಖ್ಯಮಂತ್ರಿ ಟ್ವಿಟ್ ಮಾಡಿದ್ದಾರೆ.
ಕುರ್ಮಿ ಕಳೆದ ವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪ್ರತಿಪಕ್ಷದ ಶಾಸಕರು ಬಿಜೆಪಿಗೆ ಸೇರ್ಪಡೆಯಾದರೆ ಎಲ್ಲರೂ ಅಸ್ಸಾಂ ಅಭಿವೃದ್ಧಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂದು ಶರ್ಮಾ ಹೇಳಿದ್ದರು. ಆದ್ದರಿಂದ ಶರ್ಮಾ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಮಾರಿಯಾನಿ ಕ್ಷೇತ್ರದಿಂದ 2006 ರಿಂದಲೂ ಸ್ಪರ್ಧಿಸುತ್ತಿದ್ದ ರುಪ್ ಜ್ಯೋತಿ ಕುರ್ಮಿ ಒಂದೇ ಬಾರಿಯೂ ಸೋತಿರಲಿಲ್ಲ. ತಾವೂ ನೀಡಿರುವ ಕೊಡುಗೆಯನ್ನು ಗುರುತಿಸದಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಅಸಮಾಧಾನಗೊಂಡಿದ್ದರು. ಬದ್ಧತೆಯ ಹೊರತಾಗಿಯೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಾಂಗ್ರೆಸ್ ನಿರಾಕರಿಸಿದ್ದಕ್ಕೆ ನೊಂದಿದ್ದರು. ಅಲ್ಲದೇ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನವೂ ನೀಡಿದಿದ್ದಾಗ ಪಕ್ಷ ತೊರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ