ಪೊಲೀಸರು, ಕೌನ್ಸಿಲರ್ ಗಳು, ನಾಗರೀಕರ ಸಾವಿಗೆ ಕಾರಣನಾಗಿದ್ದ ಲಷ್ಕರ್ ಉಗ್ರ ಮುದಸಿರ್ ಸೇರಿದಂತೆ 3 ಉಗ್ರರು ಸೇನಾ ಎನ್ ಕೌಂಟರ್ ನಲ್ಲಿ ಹತ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 3 ಪೊಲೀಸರು, ಇಬ್ಬರು ಕೌನ್ಸಿಲರ್ ಗಳು, 2 ನಾಗರೀಕರ ಸಾವಿಗೆ ಕಾರಣರಾಗಿದ್ದ ಪ್ರಮುಖ ಲಷ್ಕರ್ ಉಗ್ರ ಮುದಸಿರ್ ಸೇರಿದಂತೆ ಒಟ್ಟು 3 ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ.
ಕಾಶ್ಮೀರದಲ್ಲಿ ಸೇನಾ ಎನ್ಕೌಂಟರ್
ಕಾಶ್ಮೀರದಲ್ಲಿ ಸೇನಾ ಎನ್ಕೌಂಟರ್
Updated on: 

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 3 ಪೊಲೀಸರು, ಇಬ್ಬರು ಕೌನ್ಸಿಲರ್ ಗಳು, 2 ನಾಗರೀಕರ ಸಾವಿಗೆ ಕಾರಣರಾಗಿದ್ದ ಪ್ರಮುಖ ಲಷ್ಕರ್ ಉಗ್ರ ಮುದಸಿರ್ ಸೇರಿದಂತೆ ಒಟ್ಟು 3 ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ.

ಕಾಶ್ಮೀರದ ಸೋಪೋರ್ ಜಿಲ್ಲೆಯ ಗುಂಡ್ ಬ್ರಾತ್ ಪ್ರದೇಶದಲ್ಲಿ ನಡೆದ ಮ್ಯಾರಥಾನ್ ಎನ್ ಕೌಂಟರ್ ನಲ್ಲಿ ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಮುದಸಿರ್ ಪಂಡಿತ್ ಮತ್ತು ವಿದೇಶಿ ಉಗ್ರ ಪಾಕ್ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಸೇರಿದಂತೆ ಮೂರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು, ಕಾಶ್ಮೀರದಲ್ಲಿ 3 ಪೊಲೀಸರು, ಇಬ್ಬರು ಕೌನ್ಸಿಲರ್ ಗಳು, 2 ನಾಗರೀಕರ ಸಾವಿಗೆ ಕಾರಣರಾಗಿದ್ದ ಲಷ್ಕರ್ ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ. ಈ ಪೈಕಿ ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಮುದಸಿರ್  ಪಂಡಿತ್ ಮತ್ತು ವಿದೇಶಿ ಉಗ್ರ ಪಾಕ್ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಕೂಡ ಸೇರಿದ್ದಾರೆ ಎಂದು ಹೇಳಿದರು. ಈ ಪೈಕಿ ವಿದೇಶಿ ಉಗ್ರ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ 2018ರವರೆಗೂ ಉತ್ತರ ಕಾಶ್ಮೀರದಲ್ಲಿ ಸಕ್ರಿಯವಾಗಿ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ವಿಜಯ್ ಕುಮಾರ್ ಮಾಹಿತಿ  ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com