ಪುದುಚೇರಿ: ನೂತನ ಸಚಿವರಿಗೆ ಪ್ರಮಾಣ ವಚನ ಬೋಧನೆ ವೇಳೆ ತಮಿಳು ಶೈಲಿ ಪದ ಬಳಕೆ ಮಾಡಿಲ್ಲ; ರಾಜಭವನ ಸ್ಪಷ್ಟನೆ

ವಿವಾದ ಮತ್ತು ಸುದ್ದಿಗೆ ಗ್ರಾಸವಾಗಿದ್ದ ಪುದುಚೇರಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ 'ಕೇಂದ್ರ ಸರ್ಕಾರ' ಪದ ಬಳಕೆ ವಿಚಾರ ಸಂಬಂಧ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಸ್ಪಷ್ಟನೆ ನೀಡಿದೆ.
ಪುದುಚೇರಿ ಗವರ್ನರ್ ತಮಿಳಿಸೈ ಸೌಂದರಾಜನ್
ಪುದುಚೇರಿ ಗವರ್ನರ್ ತಮಿಳಿಸೈ ಸೌಂದರಾಜನ್
Updated on

ಪುದುಚೇರಿ: ವಿವಾದ ಮತ್ತು ಸುದ್ದಿಗೆ ಗ್ರಾಸವಾಗಿದ್ದ ಪುದುಚೇರಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ 'ಕೇಂದ್ರ ಸರ್ಕಾರ' ಪದ ಬಳಕೆ ವಿಚಾರ ಸಂಬಂಧ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಸ್ಪಷ್ಟನೆ ನೀಡಿದೆ.

ಜೂನ್ 27 ರಂದು ಹೊಸ ಮಂತ್ರಿಗಳಿಗೆ ಪ್ರಮಾಣವಚನ ಭೋಧನೆ ಮಾಡುವಾಗ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರಾಜನ್ ಅವರು 'ಒಂಡ್ರಿಯಾ ಅರಸು' (ಕೇಂದ್ರ ಸರ್ಕಾರ) ಎಂಬ ಪದವನ್ನು ಬಳಸಲಿಲ್ಲ ಎಂದು ರಾಜ್ ನಿವಾಸ್ ಮಂಗಳವಾರ ನೀಡಿದ ಸ್ಪಷ್ಟೀಕರಣ ನೀಡಿದೆ.

ಈ ಹಿಂದೆ ತಮಿಳುನಾಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗ ತಮಿಳುನಾಡಿನ ಡಿಎಂಕೆ ಸರ್ಕಾರವು ಕೇಂದ್ರ ಸರ್ಕಾರವನ್ನು ಉಲ್ಲೇಖಿಸಲು 'ಮಥಿಯಾ ಅರಾಸು' (ಕೇಂದ್ರ ಸರ್ಕಾರ) ಬದಲಿಗೆ ಇದನ್ನು ಬಳಸಿದ ನಂತರ ಈ ಪದವು ವಿವಾದಕ್ಕೆ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಮಾಣವಚನ  ಸಮಾರಂಭದ ನಂತರ, ಲೆಫ್ಟಿನೆಂಟ್ ಗವರ್ನರ್ ಅವರು "ಒಂಡ್ರಿಯಾ ಅರಸು" ಎಂಬ ಪದವನ್ನು ಬಳಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟ್ರೋಲ್ ಮಾಡಲಾಗಿತ್ತು.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪುದುಚೇರಿ ಸರ್ಕಾರವು ಸಾಂಪ್ರದಾಯಿಕವಾಗಿ ಹಲವು ವರ್ಷಗಳಿಂದ ಬಳಸಿದ ಪ್ರತಿಜ್ಞೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ತಮಿಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗಿದೆ ಎಂದು ರಾಜ್ ನಿವಾಸ್ ಸ್ಪಷ್ಟಪಡಿಸಿದೆ. 

ಮಂತ್ರಿಗಳು ತಮಿಳಿನಲ್ಲಿ ಪ್ರಮಾಣವಚನ ಸ್ವೀಕರಿಸಿದಂತೆ ಮತ್ತು ಅದನ್ನು "ಇಂಡಿಯಾ ಒಂಟ್ರಿಯಾ ಪುದುಚೇರಿ ಆಚ್ಚಿಪ್ಪರಪ್ಪು (ಭಾರತದ ಕೇಂದ್ರಾಡಳಿತ ಪ್ರದೇಶ ಪುದುಚೇರಿ)" ಎಂದು ಉಲ್ಲೇಖಿಸಲಾಗಿದೆ, ಜೊತೆಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನು ಉಲ್ಲೇಖಿಸಲು "ಒಂಟ್ರಿಯಾ" ಪದವನ್ನು  ಉಲ್ಲೇಖಿಸಲಾಗಿದೆ. ಇದನ್ನು ಫ್ರೆಂಚ್ ಆಡಳಿತದಲ್ಲಿದ್ದ ಮತ್ತು ನಂತರ ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಿದ್ದರಿಂದ ಇದನ್ನು "ಇಂಡಿಯನ್ ಯೂನಿಯನ್ ಟೆರಿಟರಿ" ಎಂದು ಕರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ತಿಂಗಳ ಸಂಪುಟ ರಚನೆ ಸರ್ಕಸ್ ಕೊನೆ
ಇನ್ನು ಸರ್ಕಾರ ರಚನೆ ಬಳಿಕ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಪುಟ ರಚನೆ ಸರ್ಕಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಎನ್ ರಂಗಸ್ವಾಮಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಇಬ್ಬರು ಬಿಜೆಪಿ ಶಾಸಕರು ಸೇರಿದಂತೆ ಐವರಿಗೆ ಸಂಪುಟ  ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾನುವಾರ ರಾಜ ನಿವಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ತಮಿಲಿಸಾಯಿ ಸೌಂದರಾಜನ್ ನೂತನ ಸಚಿವರಾದ ಎ ನಮಸ್ಸಿವಾಯಂ, ಕೆ. ಲಕ್ಷ್ಮಿ ನಾರಾಯಣನ್, ಸಿ ದೇಜುಕುಮಾರ್, ಚಂದಿರ ಪ್ರಿಯಾಂಗ್ ಮತ್ತು ಎಕೆ ಸಾಯಿ ಜೆ ಸರವಣ  ಕುಮಾರ್ ರಿಗೆ ಪ್ರಮಾಣವಚನ ಬೋಧಿಸಿದರು. ಸರಳವಾಗಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯ ಸಂಪುಟ ಸೇರಿದ ಎಲ್ಲ ನೂತನ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

41 ವರ್ಷಗಳ ನಂತರ ಮೊದಲ ದಾಖಲೆ
ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಂದಿರ ಪ್ರಿಯಾಂಗ್ ರಿಗೆ ಸಚಿವ ಸ್ಥಾನ ನೀಡುವ ಮೂಲಕ 41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸಚಿವರಾಗಿ  ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು 1980-83ರ ಅವಧಿಯಲ್ಲಿ ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಎಂ ಡಿ ಆರ್ ರಾಮಚಂದ್ರನ್ ಸರ್ಕಾರದಲ್ಲಿ ರೇಣುಕಾ ಅಪ್ಪಾದೊರೈ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com