ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ರೈತರ ಹಠದಿಂದ ಯಾವುದೇ ಉದ್ದೇಶ ಸಾಧಿಸುವುದಿಲ್ಲ: ಮನೋಹರ್ ಲಾಲ್ ಖಟ್ಟರ್

ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಬಗ್ಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳು ಅಚಲವಾಗಿರಬಾರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಹೇಳಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
Updated on

ಚಂಢೀಘಡ: ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಬಗ್ಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳು ಅಚಲವಾಗಿರಬಾರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಖಟ್ಟರ್, ಸರ್ಕಾರದೊಂದಿಗಿನ ಮಾತುಕತೆಗೆ ಇದನ್ನು ಪೂರ್ವಭಾವಿ ಷರತ್ತುಗಳನ್ನಾಗಿ ಮಾಡುವುದು ಯಾವುದೇ ಉದ್ದೇಶವನ್ನು ಸಾಧಿಸುವುದಿಲ್ಲ. ಬೆರಳೆಣಿಕೆಯಷ್ಟು ಜನರು" ಮಾತ್ರ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ ಮತ್ತು ಸಾಮಾನ್ಯ ರೈತರು ಸಂತೋಷವಾಗಿದ್ದಾರೆ ಎಂದರು.

ಪ್ರತಿಭಟನೆ ನಡೆಸುತ್ತಿರುವವರು ವಾಸ್ತವದಲ್ಲಿ ರೈತರಲ್ಲ. ನಿಜವಾದ ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಯಾವುದೇ ಆಕ್ಷೇಪವಿಲ್ಲ, ಅವರು ಸಂತೋಷವಾಗಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸುವವರು ರಾಜಕೀಯ ಕಾರಣಗಳಿಂದ ಮಾತ್ರ ಹಾಗೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಪಂಜಾಬ್ ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ತಂಡಗಳು ಈ ರೀತಿಯಲ್ಲಿ ಮಾಡುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಚುನಾವಣೆ ಇಲ್ಲ, ರಾಜಕೀಯ ಬಳಸಿಕೊಂಡು ಸರ್ಕಾರವನ್ನು ದೂಷಿಸುವುದು ಇಲ್ಲಿ ಕಾರ್ಯಸೂಚಿಯಾಗಿದೆ. ಕಾಂಗ್ರೆಸ್ ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.

ರೈತ ಎಂಬ ಪದವು ಪವಿತ್ರವಾದುದು, ಆದರೆ ಕಳೆದ ತಿಂಗಳು ಟಿಕ್ರಿ ಗಡಿಯಲ್ಲಿ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳ ಮೇಲೆ ಲೈಂಗಿಕ ಶೋಷಣೆ ನಡೆದಿದೆ ಎನ್ನಲಾದ  ಕೆಲವು ಘಟನೆಗಳು ಜನರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಲು ಪ್ರೇರೇಪಿಸಿವೆ ಎಂದು ಖಟ್ಟರ್ ಅಭಿಪ್ರಾಯಪಟ್ಟರು.

ಪ್ರತಿಭಟನೆ ನಿಲ್ಲಿಸುವಂತೆ ಮಾತುಕತೆಗೆ ರೈತರನ್ನು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಆಹ್ವಾನಿಸಿದರೂ , ರೈತ ಸಂಘಟನೆಗಳು ಕೃಷಿ ಕಾನೂನು ರದ್ದುಪಡಿಸುವ ಅಚಲತೆ ಇಟ್ಟುಕೊಂಡಿವೆ. ಕೇವಲ ಅದಕ್ಕೆ ಅಂಟಿಕೊಂಡರೆ ಯಾವುದೇ ಉದ್ದೇಶವನ್ನು ಸಾಧಿಸಲು ಆಗುವುದಿಲ್ಲ ಎಂದು ಖಟ್ಟರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com