ಶಶಿಕಲಾ ಬಹುದಿನಗಳಿಂದ ಎಐಎಡಿಎಂಕೆಯೊಂದಿಗೆ ಇಲ್ಲ: ಆಡಿಯೋ ಟೇಪ್ ಬಗ್ಗೆ ಪಳನಿಸ್ವಾಮಿ ಪ್ರತಿಕ್ರಿಯೆ
ಚೆನ್ನೈ: ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿರುವ ಮಾತುಕತೆ 1.5 ಕೋಟಿ ಕಾರ್ಯಕರ್ತರನ್ನು ಆಧರಿಸಿರುವ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎಐಎಡಿಎಂಕೆ ಸಹ ಸಂಯೋಜಕ ಕೆ ಪಳನಿಸ್ವಾಮಿ ಬುಧವಾರ ಹೇಳಿದ್ದಾರೆ. 2017ರಲ್ಲಿ ಉಚ್ಚಾಟನೆಯಾದಾಗಿನಿಂದಲೂ ಅವರು ಪಕ್ಷದೊಂದಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಸೇಲಂನ ಓಮಲೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಶಶಿಕಲಾ ಎಐಎಡಿಎಂಕೆನೊಂದಿಗೆ ಇಲ್ಲ, ಪಕ್ಷದೊಂದಿಗೆ ಸಂಪರ್ಕದಲ್ಲಿಯೂ ಇಲ್ಲ, ಕೇವಲ 10 ಜನರಲ್ಲ, ಸಾವಿರ ಜನರೊಂದಿಗೆ ಆಕೆ ಸಂವಾದ ನಡೆಸಿದರೂ 1.5 ಕೋಟಿ ಕಾರ್ಯಕರ್ತರ ಬಲವಿರುವ ಎಐಎಡಿಎಂಕೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಲಸಿಕೆ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಇದನ್ನೇ ಮಾಧ್ಯಮಗಳು ದೊಡ್ಡ ಸಮಸ್ಯೆಯಾಗಿ ಬಿಂಬಿಸುತ್ತಿವೆ ಎಂದು ಹೇಳಿದ ಪಳನಿಸ್ವಾಮಿ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಸೇರಿದಂತೆ 505 ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಡಿಎಂಕೆ, ಯಾವುದನ್ನು ಕೂಡಾ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ