ಪರ್ವೇಶ್ ಸಿಂಗ್
ದೇಶ
ಟಿಎಂಸಿ ಸಂಸದರು, ಸಿಎಂ ದೆಹಲಿಗೆ ಬರಲೇಬೇಕು, ನೋಡಿಕೊಳ್ಳುತ್ತೇವೆ: ಬಂಗಾಳ ಹಿಂಸಾಚಾರಕ್ಕೆ ಬಿಜೆಪಿ ಸಂಸದನ ಎಚ್ಚರಿಕೆ
ಬಂಗಾಳದ ಚುನಾವಣೆ ಫಲಿತಾಂಶದ ನಂತರ ನಡೆದ ಹಿಂಚಾಸಾರ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಿಂಗ್ ಟಿಎಂಸಿ ಗೂಂಡಾಗಳ ಪಕ್ಷ, ಆ ಪಕ್ಷದ ಸಂಸದರು, ಮುಖ್ಯಮಂತ್ರಿಗಳು ದೆಹಲಿಗೆ ಬರಲೇಬೇಕು ಎಂದು ಎಚ್ಚರಿಕೆ ನೀಡುವಂತಹ ಮಾತುಗಳನ್ನು ಆಡಿದ್ದಾರೆ.
ಕೋಲ್ಕತ್ತಾ: ಬಂಗಾಳದ ಚುನಾವಣೆ ಫಲಿತಾಂಶದ ನಂತರ ನಡೆದ ಹಿಂಚಾಸಾರ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಿಂಗ್ ಟಿಎಂಸಿ ಗೂಂಡಾಗಳ ಪಕ್ಷ, ಆ ಪಕ್ಷದ ಸಂಸದರು, ಮುಖ್ಯಮಂತ್ರಿಗಳು ದೆಹಲಿಗೆ ಬರಲೇಬೇಕು ಎಂದು ಎಚ್ಚರಿಕೆ ನೀಡುವಂತಹ ಮಾತುಗಳನ್ನು ಆಡಿದ್ದಾರೆ.
ಫಲಿತಾಂಶದ ದಿನ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಗೂಂಡಾಗಳೇ ಹಿಂಸಾಚಾರ ನಡೆಸಿದ್ದು, ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಟಿಎಂಸಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ನೆನಪಿಡಿ, ಟಿಎಂಸಿ, ಸಂಸದರು, ಮುಖ್ಯಮಂತ್ರಿಗಳೂ ದೆಹಲಿಗೆ ಬರಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣೆಯು ಸೋಲು ಅಥವಾ ಗೆಲುವನ್ನು ಒಳಗೊಂಡಿರಬೇಕೇ ವಿನಃ ಕೊಲೆಯನ್ನಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಮೇ 2ರಂದು ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಟಿಎಂಸಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ