ಕೋವಿಡ್ ಮೂರನೇ ಅಲೆಗೆ ದೇಶ ಸಿದ್ಧಗೊಳ್ಳಬೇಕಿದೆ: ಆಕ್ಸಿಜನ್ ಸಂಗ್ರಹ ಅಗತ್ಯ- ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕೋವಿಡ್-19 ಮೂರನೇ ಅಲೆಗೆ ದೇಶ ಸಿದ್ಧಗೊಳ್ಳಬೇಕಾಗಿದೆ.ಈ ಅವಧಿಯಲ್ಲಿ ವಿಶೇಷವಾಗಿ  ಮಕ್ಕಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂದು ತಜ್ಞರು ಹೇಳಿದ್ದು, ಆಮ್ಲಜನಕದ ಬಪರ್ ಸ್ಟಾಕ್ ರಚಿಸಬೇಕಾದ ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಹೈದ್ರಾಬಾದಿನಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮನೆಗೆ ವಾಪಸ್ ಆಗುತ್ತಿರುವ ಸೋಂಕಿತ ಮಹಿಳೆ
ಹೈದ್ರಾಬಾದಿನಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮನೆಗೆ ವಾಪಸ್ ಆಗುತ್ತಿರುವ ಸೋಂಕಿತ ಮಹಿಳೆ
Updated on

ನವದೆಹಲಿ: ಕೋವಿಡ್-19 ಮೂರನೇ ಅಲೆಗೆ ದೇಶ ಸಿದ್ಧಗೊಳ್ಳಬೇಕಾಗಿದೆ.ಈ ಅವಧಿಯಲ್ಲಿ ವಿಶೇಷವಾಗಿ  ಮಕ್ಕಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂದು ತಜ್ಞರು ಹೇಳಿದ್ದು, ಆಮ್ಲಜನಕದ ಬಪರ್ ಸ್ಟಾಕ್ ರಚಿಸಬೇಕಾದ ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಮುಂದಿನ ಆದೇಶದವರೆಗೂ ದೆಹಲಿಗೆ ಆಮ್ಲಜನಕ ಪೂರೈಕೆಯನ್ನು 700 ಮೆಟ್ರಿಕ್ ಟನ್ ಗಿಂತ ಕಡಿಮೆ ಮಾಡಬಾರದು ಮತ್ತು ತರ್ಕಬದ್ಧವಾಗಿ ಆಕ್ಸಿಜನ್ ಪೂರೈಕೆಯನ್ನು ಪೂರ್ಣಗೊಳಿಸಲು ಪ್ಯಾನ್ ಇಂಡಿಯಾ ನಿಯಮವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿತು.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗೆ ಪ್ರಯತ್ನ ಮಾಡುತ್ತಿದ್ದರೂ ದೆಹಲಿಯ ಜನರು ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಿಂದ ಸಾಕಷ್ಟು ಜನರು ಸಾಯುತ್ತಿದ್ದಾರೆ.ಆಕ್ಸಿಜನ್ ಹಂಚಿಕೆ ಹಾಗೂ ಪೂರೈಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಿನ ಆರೋಪ, ಪ್ರತ್ಯಾರೋಪದ ಆಟದಲ್ಲಿ ಮರುಪರಿಶೀಲನೆ ಆಧಾರದ ಮೇಲೆ ದೇಶದ ಉನ್ನತ ನ್ಯಾಯಾಲಯ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಕೋವಿಡ್ ಮೂರನೇ ಅಲೆ ಎದುರಿಸಲು ನಾವು ಸಿದ್ಧರಾಗಬೇಕಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂದು ಕೆಲ ತಜ್ಞರು ಹೇಳಿದ್ದಾರೆ. ವೃದ್ಧರಿಗೆ ಹೋಲಿಸಿದರೆ ಮಕ್ಕಳು ಹೆಚ್ಚು ಚೇತರಿಸಿಕೊಳ್ಳುತ್ತಾರೆ ಆದರೆ, ಅವರೇ ಆಸ್ಪತ್ರೆಗೆ ಹೋಗುವುದಕ್ಕೆ ಆಗಲ್ಲ,ಅವರ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರನ್ನು ದುರ್ಬಲರನ್ನಾಗಿ ಮಾಡುತ್ತಾರೆ ಎಂಬುದನ್ನು  ಪರಿಗಣಿಸಬೇಕಾಗಿದೆ ಎಂದು  ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್ ಮತ್ತು  ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಹೇಳಿತು.

ಸುಪ್ರೀಂಕೋರ್ಟ್ ದೇಶದ ಸಂವಿಧಾನಿಕ ಕೋರ್ಟ್ ಆಗಿದ್ದು, ಮರು ಪರಿಶೀಲನೆ ಆಧಾರದ ಮೇಲೆ ಅನುಮತಿಸುವುದಿಲ್ಲ, ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ ಮತ್ತು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ಅವರಿಗೆ ನ್ಯಾಯಪೀಠ ಎಚ್ಚರಿಕೆ ನೀಡಿತು.

ಮೇ 4 ರಂದು ರಾಷ್ಟ್ರರಾಜಧಾನಿಯ 56 ಪ್ರಮುಖ ಆಸ್ಪತ್ರೆಗಳಲ್ಲಿ ಸರ್ವೇ ನಡೆಸಲಾಗಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಆಕ್ಸಿಜನ್ ಸಂಗ್ರಹವಿದೆ. ಒಂದು ವೇಳೆ 700 ಮೆಟ್ರಿಕ್ ಟನ್ ಆಕ್ಸಿಜನ್ ನ್ನು ದೆಹಲಿಗೆ ನೀಡಿದರೆ, ಉಳಿದ ರಾಜ್ಯಗಳ ಬೇಡಿಕೆಗೆ ತಕ್ಕಂತೆ ಪೂರೈಸಲು ಕಷ್ಟವಾಗುತ್ತದೆ ಎಂದು ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಹೇಳಿದರು. 

ಆಕ್ಸಿಜನ್ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆರೋಪಗಳು ಕೇಳಿಬರುತ್ತಿದ್ದು, ಬಪರ್ ಸ್ಟಾರ್ ಏಕೆ ರಚಿಸಬಾರದು ಎಂದು ಪ್ರಶ್ನಿಸಿದ ನ್ಯಾಯಾಲಯ, ಮುಂಬೈನಲ್ಲಿ ಮಾಡಿರುವಂತೆ ಬಪರ್ ಸ್ಟಾಕ್ ರಚಿಸಿ, ಆ ಮೂಲಕ ಅಗತ್ಯವಿರುವ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಿ ಇದರಿಂದ ಜೀವ ಉಳಿಯುತ್ತದೆ. ಜನರು ಆಕ್ಸಿಜನ್ ಕೊರತೆಯಿಂದ ಸಾಯಬಾರದು. ಕೇಂದ್ರ ಸರ್ಕಾರ ಕೇವಲ ಚಿಕ್ಕ ಹಾಗೂ ದೊಡ್ಡ ನಗರಗಳಲ್ಲಿನ ಪರಿಸ್ಥಿತಿ ಮಾತ್ರ ಪರಿಗಣಿಸಬಾರದು, ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ಕಡೆಗೂ ಗಮನ ನೀಡಬೇಕು. ಅಲ್ಲಿಯೂ ಕೂಡಾ ಜನರು ಆಕ್ಸಿಜನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com