ದೇಶ
ಪಾಟ್ನಾ: ಕೋವಿಡ್ 19 ನಿಯಮ ಉಲ್ಲಂಘನೆ, ಪಪ್ಪು ಯಾದವ್ ಬಂಧನ
ಕೋವಿಡ್ 19 ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜನ ಅಧಿಕಾರ್ ಪಾರ್ಟಿ ಮುಖಂಡ ಪಪ್ಪು ಯಾದವ್ ಅವರನ್ನು ಬಂಧಿಸಲಾಗಿದೆ.
ಪಾಟ್ನಾ: ಕೋವಿಡ್ 19 ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜನ ಅಧಿಕಾರ್ ಪಾರ್ಟಿ ಮುಖಂಡ ಪಪ್ಪು ಯಾದವ್ ಅವರನ್ನು
ಬಂಧಿಸಲಾಗಿದೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಪ್ಪು ಯಾದವ್ ಅವರನ್ನು ಬಂಧಿಸಲಾಗಿದೆ. ಅನುಮತಿ ಪಡೆಯದೇ ವಾಹನ ಬಳಸಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಸೂಪರಿಂಡೆಂಟ್ ತಿಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಕೊರೋನಾ ಸಾಂಕ್ರಾಮಿಕದಿಂದ ಸಮಸ್ಯೆಯಲ್ಲಿರುವ ಕುಟುಂಬವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕುಟುಂಬಗಳಿಗೆ ಸಹಾಯ ಮಾಡಿ ಬರುವಾಗ ನನ್ನನ್ನು ಬಂಧಿಸಿದ್ದಾರೆ ಎಂದು ಪಪ್ಪು ಯಾದವ್ ತಿಳಿಸಿದ್ದಾರೆ.