ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಲಸಿಕೆ, ಆಕ್ಸಿಜನ್, ಔಷಧ ಜೊತೆಗೆ ಪ್ರಧಾನಿಯೂ ಮಿಸ್ಸಿಂಗ್: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಲಸಿಕೆ, ಆಕ್ಸಿಜನ್ ಮತ್ತು ಔಷಧ ಜೂತೆಗೆ ಪ್ರಧಾನಿ ಕೂಡಾ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಲಸಿಕೆ, ಆಕ್ಸಿಜನ್ ಮತ್ತು ಔಷಧ ಜೂತೆಗೆ ಪ್ರಧಾನಿಯೂ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆ ಮತ್ತು ಪ್ರಧಾನಿ ಫೋಟೋ ಮಾತ್ರ ಉಳಿದಿರುವುದಾಗಿ ಅವರು ಹೇಳಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಲಸಿಕೆ, ಆಕ್ಸಿಜನ್ ಮತ್ತು ಔಷಧದೊಂದಿಗೆ ಪ್ರಧಾನಿ ಕೂಡಾ ಕಾಣೆಯಾಗಿದ್ದಾರೆ .ಸೆಂಟ್ರಲ್ ವಿಸ್ಟಾ ಯೋಜನೆ, ಔಷಧ ಮೇಲಿನ ಜಿಎಸ್ ಟಿ ಮತ್ತು ಪ್ರಧಾನಿ ಫೋಟೋ ಮಾತ್ರ ಇಲ್ಲಿ ಮತ್ತು ಅಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ ಕುರಿತು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
ಎರಡನೇ ಅಲೆ ವೇಳೆ ಪ್ರಕರಣಗಳ ಏರಿಕೆ ನಡುವೆ ದೇಶದಲ್ಲಿ ಲಸಿಕೆ, ಔಷಧಿಗಳು ಮತ್ತು ಆಕ್ಸಿಜನ್ ಕೊರತೆ ಬಗ್ಗೆ ಕೇಂದ್ರ ಸರ್ಕಾರನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೀವಾಲಾ ಕೂಡಾ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿಬರುತ್ತಿರುವುದರ ಕುರಿತು
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋದಲ್ಲಿ ಮೃತದೇಹಗಳನ್ನು ಮರಳಿನಲ್ಲಿ ಹೂಳುತ್ತಿರುವ ವರದಿಯನ್ನೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುರ್ಜೀವಾಲಾ, ಈ ನವಭಾರತದಲ್ಲಿ ಎಂತಹ ಸಮಯ ಬಂದಿದೆ. ಮೃತದೇಹಗಳು ನದಿಯಲ್ಲಿ ತೇಲುತ್ತಾ ಬರುತ್ತಿದ್ದರೂ ಸರ್ಕಾರಕ್ಕೆ ಕಾಣುತ್ತಿಲ್ಲ. ನಾಚಿಕೆಗೇಡಿನ ಸಂಗತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com