ಚಂಡೀಗಢ: ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಪತ್ರ ಬರೆದಿದ್ದು ಕೋವಿಡ್-19 ಹಿನ್ನೆಲೆ ತಕ್ಷಣವೇ ಪ್ರತಿಭಟನೆಯನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ.
ರೈತರ ನಡೆ ಹಾಗೂ ಪ್ರತಿಭಟನೆಗಳಿಂದಾಗಿ ಗ್ರಾಮೀಣ ಭಾಗಗಳಿಗೂ ಕೋವಿಡ್-19 ಸೋಂಕು ಹರಡುತ್ತಿದೆ ಎಂದು ಪತ್ರದ ಮೂಲಕ ಖಟ್ಟರ್ ಎಚ್ಚರಿಸಿದ್ದಾರೆ.
ಕೋವಿಡ್-19 ಪರಿಸ್ಥಿತಿ ತಹಬದಿಗೆ ಬಂದ ನಂತರ ಬೇಕಾದಲ್ಲಿ ನೀವು ಮತ್ತೆ ಪ್ರತಿಭಟನೆಯನ್ನು ಪುನಃ ಪ್ರಾರಂಭಿಸಿ, ಆದರೆ ಈಗ ತಕ್ಷಣವೇ ಪ್ರತಿಭಟನೆ ನಿಲ್ಲಿಸಿ ಎಂದು ಖಟ್ಟರ್ ಮನವಿ ಮಾಡಿದ್ದಾರೆ. ಕನಿಷ್ಟ ಒಂದು ತಿಂಗಳ ಕಾಲವಾದರೂ ರೈತರು ತಮ್ಮ ಪ್ರತಿಭಟನೆಗಳನ್ನು ನಿಲ್ಲಿಸಬೇಕಿದೆ ಎಂದು ಖಟ್ಟರ್ ಹೇಳಿದ್ದಾರೆ.
Advertisement