ಪುಣೆಯಲ್ಲಿ 270 ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪತ್ತೆ: ಚಿಕಿತ್ಸೆಗಾಗಿ ಎಸ್‌ಒಪಿ ರಚನೆ

ಅಪರೂಪದ ಆದರೆ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕಿನ ಸುಮಾರು 270 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿದ್ದು ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ(ಎಸ್ಒಪಿ) ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಪ್ಪು ಶಿಲೀಂಧ್ರ
ಕಪ್ಪು ಶಿಲೀಂಧ್ರ
Updated on

ಪುಣೆ: ಅಪರೂಪದ ಆದರೆ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕಿನ ಸುಮಾರು 270 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿದ್ದು ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ(ಎಸ್ಒಪಿ) ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ಎಂದೂ ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ನ ಲಕ್ಷಣಗಳು ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗಿನ ಅಥವಾ ಸೈನಸ್ ದಟ್ಟಣೆ, ಭಾಗಶಃ ದೃಷ್ಠಿಹೀನತೆ. ಕಪ್ಪು ಶಿಲೀಂಧ್ರಿ ಸೈನಸ್‌ಗಳು, ಮೆದುಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾರಣಾಂತಿಕವಾಗಬಹುದು.

ಮ್ಯೂಕೋರ್ಮೈಕೋಸಿಸ್, ಅವರ ಚಿಕಿತ್ಸೆಗೆ ಬಹುಶಿಸ್ತೀಯ ವಿಧಾನದ ಅಗತ್ಯವಿರುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಇದು ಪತ್ತೆಯಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಈವರೆಗೆ ಸುಮಾರು 270 ಪ್ರಕರಣಗಳು ವರದಿಯಾಗಿವೆ ಎಂದು ಪುಣೆ ವಿಭಾಗದ ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ. 

ನಮ್ಮ ವಿಭಾಗೀಯ ಕಾರ್ಯಪಡೆಯ ಸದಸ್ಯ ಡಾ.ಭರತ್ ಪುರಂದರೆ ಅವರು ಮ್ಯೂಕಾರ್ಮೈಕೋಸಿಸ್ ನಿರ್ವಹಣೆಗೆ ವಿವರವಾದ ಎಸ್‌ಒಪಿಗಳನ್ನು ತಂದಿದ್ದಾರೆ. ಎಸ್‌ಒಪಿಗಳನ್ನು ಕಾರ್ಯಪಡೆಯಿಂದ ಪರಿಶೀಲಿಸಲಾಗಿದೆ. ಇದನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ನೀಡಲಾಗಿದೆ. ಎಸ್‌ಒಪಿಗಳಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ. ಎಸ್‌ಒಪಿಗಳಲ್ಲಿ ಕ್ಲಿನಿಕಲ್ ಮ್ಯಾನೇಜ್‌ಮೆಂಟ್, ಟ್ರೀಟ್‌ಮೆಂಟ್ ಮಾರ್ಗಸೂಚಿ, ರೋಗಿಗಳ ನಿರ್ವಹಣೆ, ಶಸ್ತ್ರಚಿಕಿತ್ಸಾ ಹಸ್ತಕ್ಷೇಪ ಮತ್ತು ಔಷಧಿಗಳ ಬಗ್ಗೆ ವಿವರಗಳಿವೆ ಎಂದು ರಾವ್ ಹೇಳಿದರು.

ಇದು ಅಪರೂಪದ ಶಿಲೀಂಧ್ರ ಸೋಂಕು. ಕೋವಿಡ್ ಕ್ಕಿಂತ ಮೊದಲು, ನಾವು ಅಂತಹ ಪ್ರಕರಣಗಳನ್ನು ನೋಡುತ್ತಿದ್ದೆವು, ಆದರೆ ಅವುಗಳ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಕೋವಿಡ್ ಮೊದಲ ಅಲೆಯಲ್ಲಿ ನಾವು ನಾಲ್ಕರಿಂದ ಐದು ಪ್ರಕರಣಗಳು ಪತ್ತೆಯಾಗುತ್ತಿತ್ತು. ಆದರೆ ಕೊರೋನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ ಎಂದು ನೋಬಲ್ ಆಸ್ಪತ್ರೆಯ ಮೈಕ್ರೊವಾಸ್ಕುಲರ್ ಪುನರ್ನಿರ್ಮಾಣ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಘೋಷ್ ಹೇಳಿದ್ದಾರೆ. ಇನ್ನು ತಮ್ಮ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 40 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com