ಪ್ರಧಾನಿ ನರೇಂದ್ರ ಮೋದಿ
ದೇಶ
ಕೋವಿಡ್-19 ಲಸಿಕೆ ನೀತಿ ವಿರುದ್ಧ ಪೋಸ್ಟರ್ ಗಳಲ್ಲಿ ಟೀಕೆ: 25 ಮಂದಿ ಬಂಧನ
ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ.
"ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದ್ರಿ ಮೋದಿ ಜೀ? ಎಂದು ಪ್ರಶ್ನಿಸಿದ್ದ ಪೋಸ್ಟರ್ ಗಳನ್ನು ದೆಹಲಿ ನಗರದ ಹಲವು ಕಡೆಗಳಲ್ಲಿ ಪೋಸ್ಟರ್ ನ್ನು ಹಾಕಲಾಗಿತ್ತು. ಗುರುವಾರದಂದು ಪೊಲೀಸರು ಈ ಪೋಸ್ಟರ್ ಗಳ ಬಗ್ಗೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ದೂರುಗಳನ್ನು ಆಧರಿಸಿ 25 ಎಫ್ಐಆರ್ ಗಳನ್ನು ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಿ 25 ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಎಫ್ಐಆರ್ ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ