ಮುಂಬೈ: ಟೌಕ್ಟೆ ಚಂಡಮಾರುತಕ್ಕೆ 273 ಮಂದಿ ಇದ್ದ ಬಾರ್ಜ್ ದಿಕ್ಕಾಪಾಲು!

ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 
ಮುಂಬೈ: ಟೌಕ್ಟೆ ಚಂಡಮಾರುತಕ್ಕೆ ದಿಕ್ಕಾಪಾಲಾಯ್ತು 273 ಮಂದಿ ಇದ್ದ ಬಾರ್ಜ್!
ಮುಂಬೈ: ಟೌಕ್ಟೆ ಚಂಡಮಾರುತಕ್ಕೆ ದಿಕ್ಕಾಪಾಲಾಯ್ತು 273 ಮಂದಿ ಇದ್ದ ಬಾರ್ಜ್!

ಮುಂಬೈ: ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 

ಟೌಕ್ಟೆ  ಚಂಡಮಾರುತ ಮೇ.17 ರಂದು ಸಂಜೆ ಗುಜರಾತ್ ನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ  ಬಾಂಬೆ ಹೈ ಏರಿಯಾದ ಹೀರಾ ಆಯಿಲ್ ಫೀಲ್ಡ್ಸ್ ನಿಂದ ಬಾರ್ಜ್ P305 ದಿಕ್ಕಾಪಾಲಾಗಿದ್ದು, ಈ ಬಾರ್ಜ್ ನಲ್ಲಿ 273 ಮಂದಿ ಇದ್ದರು. ಬಾರ್ಜ್ ನಲ್ಲಿದ್ದವರ ಶೋಧ, ರಕ್ಷಣೆ ಕಾರ್ಯಾಚರಣೆಗಾಗಿ  ಐಎನ್ಎಸ್ ಕೊಚ್ಚಿಯನ್ನು ಕಳಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. 

ಆಯಿಲ್ ಫೀಲ್ಡ್ಸ್ ಮುಂಬೈ ನ ನೈರುತ್ಯದಾದ್ಯಂತ 70 ಕಿ.ಮೀ ವರೆಗೂ ಕಾಣಸಿಗುತ್ತದೆ. ಟೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕಾಗಿ ಹಲವು ಹಡಗುಗಳನ್ನು ಕಳಿಸಲಾಗಿದೆ. 

ಯುದ್ಧನೌಕೆ ಬಾರ್ಜ್ ನ್ನು ಸಂಜೆ 4 ಗಂಟೆ ವೇಳೆಗೆ ತಲುಪಲಿದೆ. ಇನ್ನು ಚಂಡಮಾರುತದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ವರೆಗೆ ಸ್ಥಗಿತಗೊಳಿಸಲಾಗಿತ್ತು. ರಾಯ್ ಘಡ ಜಿಲ್ಲೆ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ನ್ನು ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com