ಕೆಕೆ ಶೈಲಜಾ ಕೈಬಿಟ್ಟ ಪಿಣರಾಯಿ ವಿಜಯನ್, ಸಿಎಂ ಅಳಿಯ ಸೇರಿ ಹಲವು ಹೊಸಬರಿಗೆ ಅವಕಾಶ

ಕೋವಿಡ್ -19 ವಿರುದ್ಧದ ಕೇರಳ ಹೋರಾಟವನ್ನು ಅಸಾಧಾರಣವಾಗಿ ನಿಭಾಯಿಸುವುದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಕೊಂಡಿದ್ದ ಸಿಪಿಎಂ ಹಿರಿಯ...
ಕೆ.ಕೆ.ಶೈಲಜಾ - ಪಿಣರಾಯಿ
ಕೆ.ಕೆ.ಶೈಲಜಾ - ಪಿಣರಾಯಿ
Updated on

ತಿರುವನಂತಪುರಂ: ಕೋವಿಡ್ -19 ವಿರುದ್ಧದ ಕೇರಳ ಹೋರಾಟವನ್ನು ಅಸಾಧಾರಣವಾಗಿ ನಿಭಾಯಿಸುವುದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಕೊಂಡಿದ್ದ ಸಿಪಿಎಂ ಹಿರಿಯ ನಾಯಕಿ ಮತ್ತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಪಿಣರಾಯಿ ವಿಜಯನ್ ಸರ್ಕಾರದ ಎರಡನೇ ಅವಧಿಗೆ ಕೈಬಿಡಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ಹೊಸ ಸಂಪುಟದ ಎಲ್ಲಾ ಸಚಿವರು ಹೊಸಬರಾಗಿದ್ದು, ಅಚ್ಚರಿ ಮೂಡಿಸಿದೆ. ಮತ್ತೆ ಸಂಪುಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದ್ದ ಶೈಲಜಾ ಅವರನ್ನು ಸಹ ಈ ಬಾರಿ ಸಂಪುಟದಿಂದ ಹೊರಗಿಡಲಾಗಿದೆ.

ಮಂಗಳವಾರ ಇಲ್ಲಿ ಸಭೆ ಸೇರಿದ ಸಿಪಿಎಂ ರಾಜ್ಯ ಸಮಿತಿ, ಸಚಿವರ ವಿಷಯದಲ್ಲಿ ಸಂಪೂರ್ಣ ಬದಲಾವಣೆ ಮಾಡಲು ನಿರ್ಧರಿಸಿದ್ದು, ಶೈಲಾಜಾ ಅವರಿಗೂ ವಿನಾಯಿತಿ ನೀಡಿಲ್ಲ. 

ಶೈಲಾಜಾ ಅವರನ್ನು ಕೈಬಿಡಲಾಗಿದ್ದರೂ, ಇಬ್ಬರು ಮಹಿಳೆಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ - ಇರಿಂಜಲಕುಡ ಶಾಸಕಿ ಪ್ರಾಧ್ಯಾಪಕಿ ಆರ್ ಬಿಂದು ಮತ್ತು ಅರಣ್ಮುಲ ಶಾಸಕಿ ವೀಣಾ ಜಾರ್ಜ್ ಪಿಣರಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರೊಫೆಸರ್ ಬಿಂದು ಸಿಪಿಎಂ ಕಾರ್ಯದರ್ಶಿ, ಕೇರಳ ಉಸ್ತುವಾರಿ ಎ ವಿಜಯರಾಘವನ್ ಅವರ ಪತ್ನಿಯಾಗಿದ್ದಾರೆ.

ಕೇಂದ್ರ ಸಮಿತಿಯ ಸದಸ್ಯರಾದ ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ರಾಜ್ಯ ಕಾರ್ಯದರ್ಶಿ ಕೆ.ಎನ್.ಬಾಲಗೋಪಾಲ್, ಪಿ ರಾಜೀವ್ ಜೊತೆಗೆ ಹಿರಿಯ ನಾಯಕರಾದ ವಿ.ಎನ್. ವಾಸವನ್, ಸಾಜಿ ಚೆರಿಯನ್, ವಿ ಶಿವಾಂಕುಟ್ಟಿ, ಮೊಹಮ್ಮದ್ ರಿಯಾಜ್ ಮತ್ತು ವಿ ಅಬ್ದುಲ್ ರಹಮಾನ್ ಅವರು ಕೇರಳದ ನೂತನ ಸಚಿವರಾಗಿದ್ದಾರೆ. ಡಿವೈಎಫ್‌ಐ ರಾಷ್ಟ್ರೀಯ ಮುಖಂಡ ಮೊಹಮ್ಮದ್ ರಿಯಾಜ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com