ಟೌಕ್ಟೇ ಚಂಡಮಾರುತ: ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆ, ಹಲವು ಪ್ರದೇಶಗಳು ಜಲಾವೃತ 

ಟೌಕ್ಟೇ ಚಂಡಮಾರುತ ರಾಜಧಾನಿ ದೆಹಲಿ ಮೇಲೆ ಕೂಡ ಪ್ರಭಾವ ಬೀರಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.
ದೆಹಲಿಯ ಸುಪ್ರೀಂ ಕೋರ್ಟ್ ಮತ್ತು ಬೈರೋನ್ ದೇವಾಲಯ ಹತ್ತಿರ ಇಂದು ಬೆಳಗ್ಗೆ ಕಂಡುಬಂದಿದ್ದು ಹೀಗೆ
ದೆಹಲಿಯ ಸುಪ್ರೀಂ ಕೋರ್ಟ್ ಮತ್ತು ಬೈರೋನ್ ದೇವಾಲಯ ಹತ್ತಿರ ಇಂದು ಬೆಳಗ್ಗೆ ಕಂಡುಬಂದಿದ್ದು ಹೀಗೆ

ನವದೆಹಲಿ: ಟೌಕ್ಟೇ ಚಂಡಮಾರುತ ರಾಜಧಾನಿ ದೆಹಲಿ ಮೇಲೆ ಕೂಡ ಪ್ರಭಾವ ಬೀರಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ದೆಹಲಿಯ ದೌಲ ಕೌನ್ ಪ್ರದೇಶದಲ್ಲಿನ ದೃಶ್ಯವನ್ನು ಇಲ್ಲಿ ನಾವು ನೋಡಬಹುದು. ನಿನ್ನೆ ದೆಹಲಿಯಲ್ಲಿ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು. ಈ ತಿಂಗಳಿನ ತಾಪಮಾನದಲ್ಲಿ ಸಾಮಾನ್ಯಕ್ಕಿಂತ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಎಂದು ಹೇಳಲಾಗುತ್ತಿದ್ದು, 1951ರ ನಂತರ ಅತಿ ಕಡಿಮೆ ತಾಪಮಾನವಾಗಿದೆ.

ಕಳೆದ ರಾತ್ರಿ 8.30ಕ್ಕೆ ನೋಡಿದಾಗ 24 ಗಂಟೆಯಲ್ಲಿ ದೆಹಲಿಯಲ್ಲಿ 60 ಮಿಲಿ ಮೀಟರ್ ಮಳೆಯಾಗಿದೆ. ಇದು ಕಳೆದ 35 ವರ್ಷಗಳಲ್ಲಿಯೇ ಅಧಿಕವಾಗಿದೆ, ಟೌಕ್ಟೇ ಚಂಡಮಾರುತದ ಪರಿಣಾಮವಿದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

1976ರ ಮೇ 24ರಂದು ರಾಜಧಾನಿ ದೆಹಲಿಯಲ್ಲಿ 60 ಮಿಲಿ ಮೀಟರ್ ಮಳೆಯಾಗಿತ್ತು. ನಿನ್ನೆ ಬೆಳಗ್ಗೆಯಿಂದ ಇಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com