ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಗೌರವ ನಮನ
ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಗೌರವ ನಮನ

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯತಿಥಿ: ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರಿಂದ ಸ್ಮರಣೆ, ಗೌರವಾರ್ಪಣೆ

ಮೇ 21, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ. 30 ವರ್ಷಗಳ ಹಿಂದೆ ಮೇ,21 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.

ನವದೆಹಲಿ: ಮೇ 21, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ. 30 ವರ್ಷಗಳ ಹಿಂದೆ ಮೇ.21, 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.

ಇಂದು ಅವರ ಜಯಂತಿ ಸಂದರ್ಭದಲ್ಲಿ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ರಾಜಕೀಯ ನಾಯಕರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರು ಅವರನ್ನು ಸ್ಮರಿಸಿದ್ದಾರೆ.

ಸತ್ಯ, ಸಹಾನುಭೂತಿ, ಪ್ರಗತಿ ಎಂದರೆ ರಾಜೀವ್ ಗಾಂಧಿಯವರು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇಂದು ಬೆಳಗ್ಗೆ ಅವರು ದೆಹಲಿಯಲ್ಲಿರುವ ರಾಜೀವ್ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.

ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರೀತಿಗಿಂತ ದೊಡ್ಡ ಶಕ್ತಿ ಇಲ್ಲ, ದಯೆಗಿಂತ ದೊಡ್ಡ ಧೈರ್ಯವಿಲ್ಲ, ಸಹಾನುಭೂತಿಗಿಂತ ದೊಡ್ಡ ಶಕ್ತಿ ಇಲ್ಲ ಮತ್ತು ನಮ್ರತೆಗಿಂತ ದೊಡ್ಡ ಶಿಕ್ಷಕರಿಲ್ಲ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ವಿಡಿಯೊ ಮಾಡಿ ಅಗಲಿದ ನಾಯಕನಿಗೆ ಗೌರವ ನಮನ ಸಲ್ಲಿಸಿದೆ. ಸತ್ಯ, ಪ್ರೀತಿ ಮತ್ತು ಸಹಾನುಭೂತಿ ಪರವಾಗಿ ನಿಂತರು. ಅವರು ನಮ್ಮ ಜನರ ಶಕ್ತಿಯನ್ನು ನಂಬಿದ್ದರು. ಅವರು ನಮ್ಮ ಮಹಾನ್ ರಾಷ್ಟ್ರದ ಮೂಲ ಮೌಲ್ಯಗಳನ್ನು ಎತ್ತಿಹಿಡಿದಿದ್ದರು. ವಿಶ್ವದ ಅತ್ಯುತ್ತಮ ರಾಷ್ಟ್ರಗಳ ಪೈಕಿ ಭಾರತ ಒಂದಾಗಲು ಶ್ರಮಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಪ್ರಧಾನಿಯಾದ, ಭಾರತ ರತ್ನ ರಾಜೀವ್ ಗಾಂಧಿಗೆ ನಮನಗಳು ಎಂದು ಹೇಳಿದೆ.

1984ರಲ್ಲಿ ತಮ್ಮ ತಾಯಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿ ನಂತರ ಪ್ರಧಾನಿಯಾದರು. 40ನೇ ವಯಸ್ಸಿನಲ್ಲಿ ಪ್ರಧಾನಿಯಾಗುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಿ ಪಟ್ಟ ಅಲಂಕರಿಸಿದ ವ್ಯಕ್ತಿ ಎಂದು ಕೀರ್ತಿಗೆ ಪಾತ್ರರಾದರು.

ಕರ್ನಾಟಕ ಕಾಂಗ್ರೆಸ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 30ನೇ ಸಂಸ್ಮರಣೆಯ ಅಂಗವಾಗಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಜೀವ್ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಐಎನ್‌ಟಿಯುಸಿ ಅಧ್ಯಕ್ಷ ಎಸ್.ಎಸ್ ಪ್ರಕಾಶಂ ಸೇರಿ ಹಲವರು ಉಪಸ್ಥಿತರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com