ಸಿಬಿಎಸ್ಇ 12ನೇ ತರಗತಿ ಪರೀಕ್ಷೆ: ಭಾನುವಾರ ಮೋದಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ

ಬಾಕಿ ಇರುವ 12 ನೇ ತರಗತಿ ಬೋರ್ಡ್ ಪರೀಕ್ಷೆ ಸಂಬಂಧ  ಭಾನುವಾರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ರಾಜ್ಯಗಳಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಹಂತಗಳಲ್ಲಿ ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸುವ ಅಥವಾ ಆಂತರಿಕ ಮೌಲ್ಯಮಾಪನ ಯೋಜನೆ ರೂಪಿಸುವುದು ಸೇರಿದಂತೆ ಮತ್ತಿತರ ಸಲಹೆಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬಾಕಿ ಇರುವ 12 ನೇ ತರಗತಿ ಬೋರ್ಡ್ ಪರೀಕ್ಷೆ ಸಂಬಂಧ ಉನ್ನತ ಮಟ್ಟದ ಸಭೆ ನಾಳೆ ನಡೆಯಲಿದ್ದು,
 ಆಯಾ ರಾಜ್ಯಗಳಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಹಂತಗಳಲ್ಲಿ ಪ್ರಮುಖ ವಿಷಯಗಳಿಗೆ ಪರೀಕ್ಷೆ
ನಡೆಸುವ ಅಥವಾ ಆಂತರಿಕ ಮೌಲ್ಯಮಾಪನ ಯೋಜನೆ ರೂಪಿಸುವುದು ಸೇರಿದಂತೆ ಮತ್ತಿತರ ಸಲಹೆಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಶಿಕ್ಷಣ ಸಚಿವಾಲಯವು ವಿವಿಧ ಪಾಲುದಾರರಿಂದ ಸಲಹೆಗಳನ್ನು ಆಹ್ವಾನಿಸಿದ್ದು, ಅದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಂಡಿಸಲಾಗುತ್ತಿದೆ.ಸಿಬಿಎಸ್ ಸಿ ಮೂಲಗಳ ಪ್ರಕಾರ, ವಿವಿಧ ರಾಜ್ಯ ಅಥವಾ ಜಿಲ್ಲೆಗಳಲ್ಲಿರುವ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇವಲ ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸವುದು ಅಥವಾ ಪರೀಕ್ಷೆಯನ್ನು ರದ್ದು ಪಡಿಸಿ, ಆಂತರಿಕ ಮೌಲ್ಯಮಾಪನದಂತೆ ಫಲಿತಾಂಶ ಘೋಷಿಸುವ ಆಯ್ಕೆಗಳಿಗೆ ಎನ್ನಲಾಗುತ್ತಿದೆ.

ಆದಾಗ್ಯೂ, ಯಾವುದೇ ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಪಾಲುದಾರರಿಂದ ಸಲಹೆಗಳನ್ನು ಪರಗಣಿಸಿದ ಶಿಕ್ಷಣ ಸಚಿವಾಲಯದಿಂದ
 ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿರಿಯ ಬೋರ್ಡ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಭೆಯಲ್ಲಿ ಇತರ ಕೇಂದ್ರ ಸಚಿವರು, ರಾಜ್ಯ ಶಿಕ್ಷಣ ಸಚಿವರು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಪರೀಕ್ಷೆಯನ್ನು ರದ್ದುಪಡಿಸುವಂತೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ಶಾಲಾ ಪ್ರಾಂಶುಪಾಲರು ಸಂಭಾವ್ಯ ಆಯ್ಕೆಗಳ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಿಬಿಎಸ್ ಇ ಏಪ್ರಿಲ್ 14 ರಂದು 10ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿ, 12ನೇ ತರಗತಿ
ಪರೀಕ್ಷೆಯನ್ನು ಮುಂದೂಡಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ
ತೆಗೆದುಕೊಳ್ಳಲಾಗಿತ್ತು. ಜೂನ್ 1ರ ನಂತರ 12ನೇ ತರಗತಿ ಬೋರ್ಡ್ ಪರೀಕ್ಷೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಬಿಎಸ್ ಇ ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com