ವೈಟ್ ಫಂಗಸ್ ಸೋಂಕು (ಸಾಂದರ್ಭಿಕ ಚಿತ್ರ)
ವೈಟ್ ಫಂಗಸ್ ಸೋಂಕು (ಸಾಂದರ್ಭಿಕ ಚಿತ್ರ)

ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ನಷ್ಟು ಅಪಾಯಕಾರಿ ಅಲ್ಲ: ಡಾ. ಸುರೇಶ್ ಕುಮಾರ್

ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ನಷ್ಟು ಅಪಾಯಕಾರಿ ಅಲ್ಲ ಎಂದು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ.

ನವದೆಹಲಿ: ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ನಷ್ಟು ಅಪಾಯಕಾರಿ ಅಲ್ಲ ಎಂದು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ.

ಒಂದೆಡೆ ಬ್ಲಾಕ್ ಫಂಗಸ್ ಸೋಂಕು ರೋಗಿಗಳನ್ನು ಹೈರಾಣಾಗಿಸುತ್ತಿದ್ದರೆ ಇತ್ತ ಮತ್ತೊಂದೆಡೆ ವೈಟ್ ಫಂಗಸ್ ಸೋಂಕು ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಇದರ ನಡುವೆಯೇ ದೇಶದ ನುರಿತ ವೈದ್ಯರು ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ  ಮಾಹಿತಿ ನೀಡಿದ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಅವರು, 'ಬಿಳಿ ಶಿಲೀಂಧ್ರ (ಆಸ್ಪರ್ಜಿಲೊಸಿಸ್) ಕಪ್ಪು ಶಿಲೀಂಧ್ರದಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.

'ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ. ಆದರೆ ಸ್ಟಿರಾಯ್ಡ್ ಗಳ ಅನಗತ್ಯ ಬಳಕೆ ಅಥವಾ ವೈದ್ಯರನ್ನು ಸಂಪರ್ಕಿಸದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೈಟ್ ಫಂಗಸ್ ಸೋಂಕನ್ನು ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ 1 ರಿಂದ  1.5 ತಿಂಗಳೊಳಗೆ ಗುಣಪಡಿಸಬಹುದು. ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿರುತ್ತದೆ. ಹೀಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಕೋವಿಡ್-19 ಗೆ ಚಿಕಿತ್ಸೆ ಪಡೆಯದಂತೆ ಡಾ.ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಇದೇ ವೇಳೆ ವೈಟ್ ಫಂಗಸ್ ಕುರಿತು ಒಂದಷ್ಟು ಸಲಹೆ ನೀಡಿರುವ ವೈದ್ಯರು, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ.. ತುಂಬಾ ದಿನಗಳ ವರೆಗೆ ಶೈತ್ಯೀಕರಿಸಿದ ಅಥವಾ ಫ್ರಿಡ್ಜ್ ನಲ್ಲಿಟ್ಟ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಬೇಡ.... ಎಂದು ಹೇಳಿದ್ದಾರೆ. ಈ ಶಿಲೀಂದ್ರಗಳು ಇಕ್ಕಟ್ಟಾದ ಮತ್ತು  ಆರ್ದ್ರ ಸ್ಥಳಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ದಿನಗಳವರೆಗೆ ಶೈತ್ಯೀಕರಿಸಿದ ತಿನ್ನಬಹುದಾದ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ, ತಾಜಾ ಹಣ್ಣುಗಳನ್ನು ಸೇವಿಸಿ, ನಿಮ್ಮ ಮನೆಯೊಳಗೆ ಸೂರ್ಯನ ಬೆಳಕು ಹೆಚ್ಚಾಗಿ ಬರುವಂತೆ ನೋಡಿಕೊಳ್ಳಿ. ನಿಮ್ಮ ಮಾಸ್ಕ್ ಗಳನ್ನು ಪ್ರತಿದಿನ ಬಿಸಿ ನೀರಲ್ಲಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಅಥವಾ ಒಗೆದ ಬಳಿಕ ಒವೆನ್ ನಲ್ಲಿ ಕೆಲಕಾಲ ಇಟ್ಟು ಒಣಗಿಸಿ.. ಇದರಿಂದ ಮಾಸ್ಕ್ ನಲ್ಲಿರಬಹುದಾದ ಸೋಂಕಿನ ಅಂಶಗಳು ಅಥವಾ ವೈರಸ್ ಗಳು ಸಾಯುತ್ತವೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com