ನವದೆಹಲಿ: ಕೋವಿಡ್ ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಗುರಗಾಂವ್ ನ ಟ್ವಿಟರ್ ಕಟೇರಿಗಳ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕದ ತಂಡ ಸೋಮವಾರ ಸಂಜೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಲಾಡೊ ಸರೈ ಮತ್ತು ರಾಷ್ಟ್ರ ರಾಜಧಾನಿಯ ಹೊರಹೊಲಯ ಗುರಗಾಂವ್ ನಲ್ಲಿ ಟ್ವಿಟ್ವಿರ್ ಇಂಡಿಯಾ ಕಟೇರಿಗಳ ಮೇಲೆ
ವಿಶೇಷ ಘಟಕದ ಎರಡು ತಂಡಗಳು ದಾಳಿ ನಡೆಸಿವೆ. ಟೂಲ್ ಕಿಟ್ ವಿಚಾರದ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್-19 ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದ ವಿಚಾರಣೆಗಾಗಿ ಟ್ವಿಟರ್ ಗೆ ವಿಶೇಷ ಘಟಕದಿಂದ ನೋಟಿಸ್ ಕಳುಹಿಸಲಾಗಿತ್ತು. ಬಿಜೆಪಿ ಮುಖಂಡ ಸಂಬೀತ್ ಪಾತ್ರ ತಿರುಚಿರುವ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡುವಂತೆ ಮೈಕ್ರೋಬ್ಲಾಗಿಂಗ್ ಸೈಟ್ ಗೆ ಕೇಳಲಾಗಿತ್ತು ಎಂದು ಅಧಿಕಾರಿ ಸೋಮವಾರ ಹೇಳಿದ್ದಾರೆ.
ಪೊಲೀಸರಿಗೆ ಗೊತ್ತಿಲ್ಲದ ಕೆಲವೊಂದು ಮಾಹಿತಿಯನ್ನು ಟ್ವಿಟರ್ ಹೊಂದಿದೆ. ಈ ಮಾಹಿತಿ ತನಿಖೆಗೆ ಪ್ರುಸ್ತುತವಾಗಿದೆ ಎಂದು ದೆಹಲಿ
ಪೊಲೀಸ್ ಪಿಆರ್ ಒ ಚಿನ್ಮಾಯಿ ಬಿಸ್ವಾಲ್ ತಿಳಿಸಿದ್ದಾರೆ.
Advertisement