ದೇಶದಲ್ಲಿ ಶೀಘ್ರದಲ್ಲೇ ಸಿಂಗಲ್ ಡೋಸ್ ಕೋವಿಡ್-19 ಲಸಿಕೆ 'ಸ್ಪುಟ್ನಿಕ್ ಲೈಟ್' ಚಾಲನೆಯ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ!

ದೇಶದಲ್ಲಿ ಶೀಘ್ರದಲ್ಲೇ ಸಿಂಗಲ್ ಡೋಸ್ ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ ಚಾಲನೆಗೊಳ್ಳುವ ನಿರೀಕ್ಷೆಯಲ್ಲಿ ಸರ್ಕಾರವಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಶೀಘ್ರದಲ್ಲೇ ಸಿಂಗಲ್ ಡೋಸ್ ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ ಚಾಲನೆಗೊಳ್ಳುವ ನಿರೀಕ್ಷೆಯಲ್ಲಿ ಸರ್ಕಾರವಿದೆ. ದೇಶದಲ್ಲಿ ಲಸಿಕಾಕರಣವನ್ನು ಹೆಚ್ಚಿಸಲು ತ್ವರಿತಗತಿಯಲ್ಲಿ ಆಪ್ಲಿಕೇಷನ್ ಮತ್ತು ನಿಯಂತ್ರಕ ಅನುಮೋದನೆ ಕಾರ್ಯವಿಧಾನಕ್ಕಾಗಿ ರಷ್ಯಾದ ಉತ್ಪಾದಕರು  ಸೇರಿದಂತೆ ಎಲ್ಲಾ ಪಾಲುದಾರರು ಮತ್ತು ಅದರ ಭಾರತೀಯ ಪಾಲುದಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮುಂದಿನ ಎರಡು ವಾರಗಳಲ್ಲಿ ಸ್ಪುಟ್ನಿಕ್ ಲೈಟ್‌ಗಾಗಿ ನಿಯಂತ್ರಕ ಅನುಮೋದನೆ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಇದು ದೇಶದಲ್ಲಿ ಚಾಲನೆಯಾಗುವ ಸಿಂಗಲ್ ಡೋಸ್ ನ ಮೊದಲ ಲಸಿಕೆಯಾಗಬಹುದು ಎಂದು ಇತ್ತೀಚಿಗೆ ಕೋವಿಡ್-19 ಲಸಿಕೆ ಲಭ್ಯ ಹೆಚ್ಚಿಸಲು ಉನ್ನತ ಅಧಿಕಾರಿಗಳ ನಡುವೆ ನಡೆದ ಚರ್ಚೆಯನ್ನು ಉಲ್ಲೇಖಿಸಿ ಮೂಲಗಳು ಹೇಳಿವೆ.

ಕಳೆದ ವಾರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಪುಟ್ನಿಕ್ ಲೈಟ್ ನಿಯಂತ್ರಕ ಅನುಮೋದನೆಗಾಗಿ ಕೂಡಲೇ ಬಯೋ ಟೆಕ್ನಾಲಜಿ  ಇಲಾಖೆ ಕಾರ್ಯದರ್ಶಿ,ಡಿಸಿಜಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು, ಆರ್ ಡಿಐಎಫ್, ಮತ್ತು ದೇಶಿಯ ಉತ್ಪಾದಕರು ಒಳಗೊಂಡಂತೆ ಎಲ್ಲಾ ಸಂಬಂಧಿತ ಪಾಲುದಾರರ ಸಭೆಯನ್ನು ನಡೆಸುವಂತೆ ಸಲಹೆ ನೀಡಲಾಗಿದೆ.

ರಷ್ಯಾ ಈಗಾಗಲೇ ಸ್ಪುಟ್ನಿಕ್ ಲೈಟ್ ಬಗ್ಗೆ ಅನುಮೋದನೆ ನೀಡಿದ್ದು, ಇತರ ರಾಷ್ಟ್ರಗಳಲ್ಲಿ ಪ್ರಯೋಗ ನಡೆಯುತ್ತಿರುವುದರ ಬಗ್ಗೆಯೂ ಸಭೆಯಲ್ಲಿ  ಚರ್ಚಿಸಲಾಗಿದೆ.ಇನ್ನೂ ಎರಡ್ಮೂರು ವಾರಗಳಲ್ಲಿ ಸ್ಪುಟ್ನಿಕ್ ಲೈಟ್ ನಿಯಂತ್ರಕ ಅನುಮೋದನೆಗಾಗಿ ಅರ್ಜಿ ಸಲ್ಲಿಸುವುದಾಗಿ  ಡಿಸಿಜಿಐ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com