ಯುದ್ಧದ ಸ್ವರೂಪ ಬದಲಾಗುತ್ತಿರುವ ಸನ್ನಿವೇಶದಲ್ಲಿ ಸೇನೆಯ ಮೂರೂ ಪಡೆಗಳ ಜಂಟಿ ಕಾರ್ಯಾಚರಣೆ ಮುಖ್ಯ: ನೌಕಾಪಡೆ ಮುಖ್ಯಸ್ಥ 

ಇಂದಿನ ಪರಿಸ್ಥಿತಿಯಲ್ಲಿ ಯುದ್ಧದ ಸ್ವರೂಪದಲ್ಲಿ ಬದಲಾವಣೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ಮೂರೂ ರಕ್ಷಣಾ ಪಡೆಗಳು ಜಂಟಿಯಾಗಿ ಕೆಲಸ ಮಾಡುವುದು ಮುಖ್ಯವಾಗುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಹೇಳಿದ್ದಾರೆ.
ನೌಕಾಪಡೆ ಮುಖ್ಯಸ್ಥ ಅ.ಕರಂಬಿರ್ ಸಿಂಗ್
ನೌಕಾಪಡೆ ಮುಖ್ಯಸ್ಥ ಅ.ಕರಂಬಿರ್ ಸಿಂಗ್

ಪುಣೆ: ಇಂದಿನ ಪರಿಸ್ಥಿತಿಯಲ್ಲಿ ಯುದ್ಧದ ಸ್ವರೂಪದಲ್ಲಿ ಬದಲಾವಣೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ಮೂರೂ ರಕ್ಷಣಾ ಪಡೆಗಳು ಜಂಟಿಯಾಗಿ ಕೆಲಸ ಮಾಡುವುದು ಮುಖ್ಯವಾಗುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಹೇಳಿದ್ದಾರೆ.

ಇಂದು ಬೆಳಗ್ಗೆ ಪುಣೆಯ ಖಡಕ್ವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 140ನೇ ಕೋರ್ಸ್ ನಿಂದ ತೇರ್ಗಡೆ ಹೊಂದಿದ ಪರೇಡ್ ನ್ನು ಪರಾಮರ್ಶೆ ನಡೆಸಿದ ನಂತರ ಮಾತನಾಡಿದ ಅವರು, ಇಂದು ಯುದ್ಧದ ಸ್ವರೂಪ ಬದಲಾಗುತ್ತಿದೆ. ಭೂಮಿ, ಸಮುದ್ರ, ಗಾಳಿ, ಬಾಹ್ಯಾಕಾಶ ಮತ್ತು ಸೈಬರ್‌ನಂತಹ ಎಲ್ಲಾ ಕಡೆಗಳಲ್ಲಿ ವಿರೋಧಿಗಳಿದ್ದು ಅವುಗಳನ್ನು ಎದುರಿಸಿ ಸೆಣಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೂರೂ ಸೇನೆಗಳು ಜಂಟಿಯಾಗಿ ಹೋರಾಡುವುದು ಮುಖ್ಯವಾಗುತ್ತದೆ ಎಂದರು.

ಮಿಲಿಟರಿ ವ್ಯವಹಾರಗಳ ಇಲಾಖೆ, ರಕ್ಷಣಾ ಮುಖ್ಯಸ್ಥರ ಸಂಸ್ಥೆ ಮತ್ತು ಶೀಘ್ರದಲ್ಲೇ ಮಿಲಿಟರಿ ಸಶಸ್ತ್ರ ಪಡೆಗಳು ಹೆಗ್ಗುರುತು ರಕ್ಷಣಾ ಸುಧಾರಣೆಗಳನ್ನು ಇದಿರು ನೋಡುತ್ತಿವೆ ಎಂದರು.

ಇಂದಿನ ಸಂಕೀರ್ಣ ಯುದ್ಧಭೂಮಿಯಲ್ಲಿ ಸಶಸ್ತ್ರ ಪಡೆಗಳಲ್ಲಿನ ಜಂಟಿತ್ವವು ಹೆಚ್ಚು ಸಹಕಾರಿ ಮತ್ತು ಪರಿಣಾಮಕಾರಿಯಾದ ಬಲವನ್ನು ಬಳಸಿಕೊಳ್ಳಬೇಕಾಗಿದೆ. ಭವಿಷ್ಯದ ಯುದ್ಧವು ಎಷ್ಟೇ ವಿಕಸನಗೊಂಡರೂ, ಪರಿಣಾಮಕಾರಿ ನಾಯಕತ್ವಕ್ಕಾಗಿ ಕೆಲವು ವೈಯಕ್ತಿಕ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳು ಪ್ರಮುಖವಾದವು ಎಂಬುದನ್ನು  ಎಲ್ಲರೂ ನೆನಪಿನಲ್ಲಿಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com